ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥರ್ಮಲ್‌ ಸ್ಕ್ಯಾನಿಂಗ್‌ ಕಡ್ಡಾಯ: ಬಿಬಿಎಂಪಿ

ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿ l ಪಾಲಿಕೆ ಕಟ್ಟುನಿಟ್ಟಿನ ಸೂಚನೆ
Last Updated 24 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಬಿಬಿಎಂಪಿಯು ಬಡಾವಣೆಗಳ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳಿಗೆ ಸ್ವಚ್ಛತೆ ಕಾಪಾಡುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದೆ.

ಒಳಬರುವವರನ್ನು ಹಾಗೂ ಹೊರ ಹೋಗುವವರನ್ನು ಥರ್ಮಲ್‌ ಸ್ಕ್ಯಾನರ್‌ ಬಳಸಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದೆ.

ಈ ಕುರಿತು ಬಿಬಿಎಂ‍ಪಿ ಮಂಗಳವಾರ ಸುತ್ತೋಲೆ ಹೊರಡಿಸಿದ್ದು ಅದರ ಪ್ರಮುಖ ಸೂಚನೆಗಳು ಈ ರೀತಿ ಇವೆ.

* ಕಟ್ಟಡಕ್ಕೆ ಹಾಗೂ ವಠಾರಕ್ಕೆ ಸೋಂಕು ನಿವಾರಣಾ ದ್ರಾವಣವನ್ನು ಸಿಂಪಡಿಸಬೇಕು/ ಧೂಮೀಕರಣ ಮಾಡಬೇಕು

* ಒಳಬರುವವರು ಹಾಗೂ ಹೊರ ಹೋಗುವವರು ಸೋಂಕು ನಿವಾರಣ ದ್ರಾವಣದಿಂದ (ಸ್ಯಾನಿಟೈಸರ್‌) ಅಥವಾ ಸಾಬೂನಿನ ದ್ರಾವಣದಿಂದ ಕಡ್ಡಾಯವಾಗಿ ಕೈತೊಳೆಯಬೇಕು. ಇದಕ್ಕೆ ಅಗತ್ಯ ಪ್ರಮಾಣದ ದ್ರಾವಣ ಲಭ್ಯ ಇರುವಂತೆ ನೋಡಿಕೊಳ್ಳಬೇಕು.

*ಹಸಿ, ಒಣ ಹಾಗೂ ಜೈವಿಕ–ವೈದ್ಯಕೀಯ (ಬಯೋ ಮೆಡಿಕಲ್‌) ತ್ಯಾಜ್ಯಗಳನ್ನು ಕಡ್ಡಾಯವಾಗಿ ಮೂಲದಲ್ಲೇ ಬೇರ್ಪಡಿಸಬೇಕು. ಸ್ಯಾನಿಟರಿ ಬಯೋಮೆಡಿಕಲ್‌ ತ್ಯಾಜ್ಯವನ್ನು ಕಾಗದದ ಚೀಲ ಅಥವಾ ಇತರ ಪರಿಸರಸ್ನೇಹಿ ಚೀಲದಲ್ಲಿ ಸಂಗ್ರಹಿಸಿ ಪ್ರತ್ಯೇಕವಾಗಿ ಸಗಟು ಕಸ ಸಂಗ್ರಹಿಸುವವರಿಗೆ ನೀಡಬೇಕು

*ಈಜುಕೊಳ ಜಿಮ್‌, ಕ್ಲಬ್‌ಹೌಸ್‌ ಉದ್ಯಾನ, ಆಟಪಾಠದ ಸಾಂಗ್ರಿ, ಮನರಂಜನಾ ಸಾಮಗ್ರಿ ಬಳಕೆ ನಿಲ್ಲಿಸಬೇಕು.

*ಶೀತ, ಕೆಮ್ಮು, ಜ್ವರದ ಲಕ್ಷಣ ಇದ್ದವರನ್ನು ತಕ್ಷಣ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು

*ಸುರಕ್ಷತಾ ದಿರಿಸು ಧರಿಸಬೇಕು. ಪರಸ್ಪರ ಮಾತನಾಡುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು

*ಸ್ವಚ್ಛತಾ ಕಾರ್ಮಿಕರು ಹಾಗೂ ಮನೆಗಳಲ್ಲಿ ಕೆಲಸ ಮಾಡುವವರು ಕೈಗವಸು, ಮುಖಗವಸು ಹಾಗೂ ಶೂ ಧರಿಸುವಂತೆ ನೋಡಿಕೊಳ್ಳಬೇಕು. ಕೈಗಳನ್ನು ಆಗಾಗ ಸ್ಯಾನಿಟೈಸರ್‌ ಬಳಸಿ ಶುಚಿಗೊಳಿಸಿಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT