ಬೆಂಗಳೂರು: ‘ಇದೇ 24ರಿಂದ ಅಕ್ಟೋಬರ್ 2ರವರೆಗೆ ತಿರುಮಲ ತಿರುಪತಿಯಲ್ಲಿ ಸಾಲಕಟ್ಲ ಬ್ರಹ್ಮೋತ್ಸವನ್ನು ಆಯೋಜಿಸಲಾಗಿದೆ. ಪ್ರತಿದಿನ 2–3 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು, ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ನರೇಶ್ ಕುಮಾರ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘24ರಂದು ಧ್ವಜಾರೋಹಣ, 28ರಂದು ಗರುಡ ಸೇವೆ, ಅಕ್ಟೋಬರ್ 1ರಂದು ರಥೋತ್ಸವ, ಅಕ್ಟೋಬರ್ 2ರಂದು ಚಕ್ರ ಸ್ನಾನ ಮತ್ತು ಧ್ವಜಾವರೋಹಣ ವಿಧಿಗಳು ನಡೆಯಲಿವೆ. ಬ್ರಹ್ಮರಥೋತ್ಸವ ನಡೆಯಲಿರುವ ಅಷ್ಟೂ ದಿನ ಆನ್ಲೈನ್ನಲ್ಲಿ 1.16 ಲಕ್ಷ ಟಿಕೆಟ್ಗಳು ಮತ್ತು 25,000 ಎಸ್ಎಸ್ಡಿ ಟೋಕನ್ಗಳನ್ನು ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

‘ವಿಐಪಿ ಟಿಕೆಟ್, ವಿಐಪಿ ಪಾಸುಗಳು ಇರುವುದಿಲ್ಲ. ದೇವಾಲಯಕ್ಕೆ ಭೇಟಿ ನೀಡುವ ಸರ್ಕಾರದ ಉನ್ನತ ಪ್ರತಿನಿಧಿಗಳಿಗೆ ಮಾತ್ರವೇ ಶಿಷ್ಟಾಚಾರದ ವ್ಯವಸ್ಥೆ ಮಾಡಲಾಗುತ್ತದೆ. ಬ್ರಹ್ಮರಥೋತ್ಸವದ ವೇಳೆ ನೂಕುನುಗ್ಗಲು ತಪ್ಪಿಸಲು ಹಲವೆಡೆ ಎಲ್ಇಡಿ ಪರದೆಗಳನ್ನು ಅಳವಡಿಸಿ, ರಥೋತ್ಸವ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದರು.

‘ತಿರುಪತಿ ಟೋಲ್ ಬಳಿಯಲ್ಲಿಯೇ ವಿಶಾಲವಾದ ವಾಹನ ನಿಲುಗಡೆ ಪ್ರದೇಶವನ್ನು ಸಜ್ಜುಗೊಳಿಸಲಾಗಿದೆ. ಏಕಕಾಲದಲ್ಲಿ 4,000 ಕಾರುಗಳು, 2,500ರಿಂದ 4,000 ದ್ವಿಚಕ್ರವಾಹನಗಳನ್ನು ಅಲ್ಲಿ ನಿಲ್ಲಿಸಬಹುದಾಗಿದೆ. ಅಲ್ಲಿಮದ ಬೆಟ್ಟಕ್ಕೆ ಪ್ರತಿದಿನ 3,200 ಟ್ರಿಪ್ಗಳಷ್ಟು ಬಸ್ ವ್ಯವಸ್ಥೆ ಇರಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.