ಬೆಂಗಳೂರು: ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ರಾಜ್ಯದ ಕ್ಯಾನ್ಸರ್ ಪೀಡಿತರಲ್ಲಿ ಶೇ 25 ರಷ್ಟು ಮಂದಿ ತಂಬಾಕು ಉತ್ಪನ್ನಗಳ ವ್ಯಸನಿಗಳು ಎನ್ನುವುದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಬದಲಾದ ಜೀವನಶೈಲಿ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಸಂಸ್ಥೆಯ ಪ್ರಕಾರ ಕಳೆದ ವರ್ಷ ಒಟ್ಟು 87,855 ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 21,898 ಪ್ರಕರಣಗಳು ತಂಬಾಕು ಸಂಬಂಧಿ ಕ್ಯಾನ್ಸರ್ ಪ್ರಕರಣಗಳಾಗಿವೆ. ಕಳೆದ ವರ್ಷ ಪುರುಷರಲ್ಲಿ ದೃಢಪಟ್ಟ 39,170 ಪ್ರಕರಣಗಳಲ್ಲಿ, 14,439 (ಶೇ 37) ಮಂದಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗಿದ್ದಾರೆ. ಅದೇ ರೀತಿ, ಮಹಿಳೆಯರಲ್ಲಿ ದೃಢಪಟ್ಟ 48,685 ಪ್ರಕರಣಗಳಲ್ಲಿ 7,459 (ಶೇ 15) ಮಂದಿ ತಂಬಾಕು ಸಂಬಂಧಿ ಕ್ಯಾನ್ಸರ್ ಎದುರಿಸುತ್ತಿರುವುದು ಖಚಿತಪಟ್ಟಿದೆ. ಕ್ಯಾನ್ಸರ್ ಪೀಡಿತರಲ್ಲಿ ಕಳೆದ ವರ್ಷ ಒಟ್ಟು 26,516 ಮಂದಿ ಮೃತಪಟ್ಟಿದ್ದಾರೆ.

ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗುತ್ತಿದ್ದು, ಕಳೆದ ವರ್ಷ 15,153 ಪ್ರಕರಣಗಳು ಖಚಿತಪಟ್ಟಿವೆ. ಈ ಪ್ರಕರಣಗಳಲ್ಲಿ ಶೇ 24.1 ರಷ್ಟು ಮಂದಿ (3,771) ತಂಬಾಕು ಉತ್ಪನ್ನದ ನಂಟು ಹೊಂದಿದ್ದಾರೆ. ತಂಬಾಕು ಸಂಬಂಧಿ ಕ್ಯಾನ್ಸರ್ ಎದುರಿಸುತ್ತಿರುವ ಪುರುಷರ ಪ್ರಮಾಣ ಶೇ 36.6 ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ 15.2ರಷ್ಟಿದೆ.

ಹೊಸ ಪ್ರಕರಣ ಅಧಿಕ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕ್ಯಾನ್ಸರ್ಗೆ ಸಂಬಂಧಿಸಿದಂತೆ ಚಿಕಿತ್ಸೆ ಜತೆಗೆ ತಪಾಸಣೆ, ಸಂಶೋಧನೆ ಹಾಗೂ ಜಾಗೃತಿಗೆ ಆದ್ಯತೆ ನೀಡಿದೆ. ಕಳೆದ ವರ್ಷ ಸಂಸ್ಥೆಯಲ್ಲಿ 21,881 ಹೊಸ ಕ್ಯಾನ್ಸರ್ ಪ್ರಕರಣಗಳು ನೋಂದಣಿಯಾಗಿವೆ. 12,930 ಪ್ರಕರಣಗಳಲ್ಲಿ ಬಯಾಪ್ಸಿ ಪರೀಕ್ಷೆ ನಡೆಸಲಾಗಿದ್ದು, 3,939 (ಶೇ 30.5) ಮಂದಿ ತಂಬಾಕು ಸಂಬಂಧಿ ಉತ್ಪನ್ನಗಳ ಸೇವನೆಯ ಇತಿಹಾಸ ಹೊಂದಿದವರಾಗಿದ್ದಾರೆ.

ಕಳೆದ ವರ್ಷ ದೃಢ ಪ್ರಕರಣಗಳಲ್ಲಿ ಬಯಾಪ್ಸಿ ಪರೀಕ್ಷೆಗೆ ಒಳಪಟ್ಟವರ ಲಿಂಗವಾರು ವಿಶ್ಲೇಷಣೆ ಮಾಡಲಾಗಿದ್ದು, ಕ್ಯಾನ್ಸರ್ ಪೀಡಿತ 6,075 ಮಂದಿ ಪುರಷರಲ್ಲಿ ಶೇ 43.8ರಷ್ಟು (2,662) ಮಂದಿ ತಂಬಾಕು ಸಂಬಂಧಿತ ಕ್ಯಾನ್ಸರ್ ಎದುರಿಸುತ್ತಿರುವವರಾಗಿದ್ದಾರೆ. 6,855 ಮಹಿಳಾ ರೋಗಿಗಳಲ್ಲಿ 1,277 (ಶೇ 18.6) ಮಂದಿ ತಂಬಾಕು ಸಂಬಂಧಿ ಕ್ಯಾನ್ಸರ್ ಎದುರಿಸಿದವರಾಗಿದ್ದಾರೆ.

ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದಲ್ಲಿ ಸುಲಭವಾಗಿ ಗುಣಪಡಿಸಲು ಸಾಧ್ಯ. ಪ್ರತಿಯೊಬ್ಬರಿಗೂ ರೋಗ ಲಕ್ಷಣಗಳ ಬಗ್ಗೆ ಅರಿವು ಅಗತ್ಯ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು
ಡಾ.ಟಿ.ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಪರೋಕ್ಷ ಧೂಮಪಾನದಿಂದಲೂ ಸಮಸ್ಯೆ

ಪರೋಕ್ಷ ಧೂಮಪಾನವೂ ನೇರ ಧೂಮಪಾನಕ್ಕೆ ಸಮಾನ. ಮಕ್ಕಳು ಮಹಿಳೆಯರು ಮತ್ತು ವೃದ್ಧರು ಪರೋಕ್ಷ ಧೂಮಪಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಿರಂತರ ಪರೋಕ್ಷ ಧೂಮಪಾನದಿಂದಲೂ ಕ್ಯಾನ್ಸರ್ ಪೀಡಿತರಾಗುವ ಸಾಧ್ಯತೆಯಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವಿಶ್ಲೇಷಿಸಿದೆ. ‘ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗಲು ತಂಬಾಕು ಉತ್ಪನ್ನಗಳ ಸೇವನೆ ಪ್ರಮುಖ ಕಾರಣ. ತಂಬಾಕು ಉತ್ಪನ್ನಗಳನ್ನು ಬಳಸುವಂತೆ ಯುವಜನರು ಮತ್ತು ಮಕ್ಕಳಿಗೆ ತಂಬಾಕು ಉತ್ಪನ್ನಗಳ ಕಂಪನಿಗಳು ಆಮಿಷ ಒಡ್ಡುತ್ತಿವೆ. ಮಹಿಳೆಯರಲ್ಲಿಯೂ ತಂಬಾಕು ಉತ್ಪನ್ನ ಸೇವನೆ ಹೆಚ್ಚಳವಾಗಿದೆ’ ಎಂದು ಸಂಸ್ಥೆಯ ವೈದ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.