ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ವೀರಶೈವ ಸರ್ವರ ಹಿತ ಬಯಸುವ ಧರ್ಮ: ರಂಭಾಪುರಿ ಸ್ವಾಮೀಜಿ

ಜಾಗೃತಿ ಸಮಾವೇಶದಲ್ಲಿ ರಂಭಾಪುರಿ ಸ್ವಾಮೀಜಿ ಅಭಿಮತ
Published 30 ಜುಲೈ 2023, 6:36 IST
Last Updated 30 ಜುಲೈ 2023, 6:36 IST
ಅಕ್ಷರ ಗಾತ್ರ

ಬೀದರ್: ‘ವೀರಶೈವ ಧರ್ಮವು ಸರ್ವರ ಹಿತ ಬಯಸುವ ಮಾತೃ ಹೃದಯದ ಧರ್ಮವಾಗಿದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿಯ ಲಾಡಗೇರಿ ಹಿರೇಮಠದಲ್ಲಿ ಈಚೆಗೆ ಆಯೋಜಿಸಿದ್ದ ವೀರಶೈವ ಧರ್ಮ ಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪುರಾತನ ಧರ್ಮಗಳಲ್ಲೊಂದಾದ ವೀರಶೈವ ಧರ್ಮದಲ್ಲಿ ಎಲ್ಲ ಧರ್ಮಗಳ ಸಾರ ಅಡಕವಾಗಿದೆ. ಎಂಟನೇ ಶತಮಾನ ಪೂರ್ವದಲ್ಲೂ ಇದರ ಕುರುಹುಗಳು ಕಾಣ ಸಿಗುತ್ತವೆ. ಸಂಶೋಧಕ ಚಿದಾನಂದ ಮೂರ್ತಿ ಅವರ ಸಂಶೋಧನಾ ಕೃತಿಗಳಲ್ಲೂ ಈ ವಿಷಯದ ಉಲ್ಲೇಖ ಇದೆ ಎಂದು ತಿಳಿಸಿದರು.

ಭಕ್ತರು ಸಾಮಾಜಿಕ ಹಾಗೂ ರಾಜಕೀಯವಾಗಿ ಜಾಗೃತರಾಗಬೇಕು. ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭೆಗೆ ಚಾರಿತ್ರ್ಯವಂತರನ್ನು ಆರಿಸಿ ಕಳಿಸಬೇಕು. ಭ್ರಷ್ಟಾಚಾರಿಗಳು ಹಾಗೂ ಅಪರಾಧ ಹಿನ್ನೆಲೆ ಉಳ್ಳವರನ್ನು ಆಯ್ಕೆಗೊಳಿಸಿದರೆ ಧರ್ಮ ಹಾಗೂ ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂದರು.

ಮಾಜಿ ಶಾಸಕ ಸುಭಾಷ್ ಕಲ್ಲೂರ ಸಮಾವೇಶ ಉದ್ಘಾಟಿಸಿದರು. ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ತಡೋಳಾದ ರಾಜೇಶ್ವರ ಶಿವಾಚಾರ್ಯ, ಹಲಬರ್ಗಾದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಸಾಯಗಾಂವ್‍ನ ಶಿವಾನಂದ ಸ್ವಾಮೀಜಿ ಇದ್ದರು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷೆ ರಾಜಶ್ರೀ ಸ್ವಾಮಿ, ಕಾಂಗ್ರೆಸ್ ಮುಖಂಡ ಶ್ರೀಕಾಂತ ಸ್ವಾಮಿ, ವೀರಶೈವ ಮುಖಂಡ ಕಾಶೀನಾಥ ಜಕ್ಕಾ, ಅಮರ ಹಿರೇಮಠ, ಬಸವರಾಜ ಸ್ವಾಮಿ, ಕುಮಾರಸ್ವಾಮಿ ಹಿರೇಮಠ, ಶಿವಕುಮಾರ ಸ್ವಾಮಿ, ವರದಯ್ಯ ಸ್ವಾಮಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಓಂಪ್ರಕಾಶ ರೊಟ್ಟೆ, ಚಂದ್ರಪ್ಪ ಅಷ್ಟೂರ, ಮಲ್ಲಪ್ಪ ಹುಲೆಪ್ಪನೋರ, ಅಮೃತರಾವ್ ವಡ್ಡಿ, ಶಿವರಾಜ ಅಷ್ಟೂರ, ಮಲ್ಲಿಕಾರ್ಜುನ ಬಸಂತಪುರೆ, ಬಂಡೆಪ್ಪ ಗಿರಿ, ರಮೇಶ ವಾಲ್ದೊಡ್ಡಿ, ಸಿದ್ರಾಮಯ್ಯ ಹಿರೇಮಠ, ಸಂಜೀವಕುಮಾರ ಸ್ವಾಮಿ, ನಾಗಯ್ಯ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT