ಹುಲಸೂರ ತಾಲ್ಲೂಕಿನ ಜಮೀನೊಂದರಲ್ಲಿ ಜಿಂಕೆಗಳ ಹಿಂಡು ಬೆಳೆ ಹಾನಿ ಮಾಡುತ್ತಿರುವುದು
ಕಾಡು ಹಂದಿ ಹಾಗೂ ಜಿಂಕೆಗಳು ಕಡಲೆ ಬಿತ್ತನೆ ಮಾಡಿದ ನಂತರ ಹೊಲದಲ್ಲಿನ ಬೀಜ ತಿಂದು ನಾಶ ಮಾಡುತ್ತಿದ್ದು ನಷ್ಟವಾಗುತಿತ್ತು. ಸೀರೆ ಕಟ್ಟಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ
ಗಣೇಶ ಪಾಟೀಲ ರೈತ ಮೀರಖಲ್
ಕಾಡು ಹಂದಿಗಳಿಂದ ಬೆಳೆ ಹಾನಿಯಾದ ಕುರಿತು ಪರಿಶೀಲಿಸಲಾಗುವುದು. ರೈತರು ಸರಿಯಾದ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದರೆ ಪರಿಹಾರ ನೀಡಲಾಗುವುದು. ಸರ್ಕಾರರಿಂದ ಸೋಲಾರ್ ತಂತಿಯ ಬೇಲಿ ಅಳವಡಿಸಿಕೊಳ್ಳಬಹುದು
ಸಂತೋಷಕುಮಾರ ಹಾಲಹಳ್ಳೇ ಆರ್‌ಎಫ್ಒ ಹುಲಸೂರ
ಇನ್ನೂ ಹಲವು ಮಾರ್ಗ
ಕೆಲ ರೈತರು ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಬಿಯರ್ ಬಾಟಲಿಗಳನ್ನು ಕೋಲಿಗೆ ಕಟ್ಟಿ ಜಮೀನಿನಲ್ಲಿ ನೇತು ಹಾಕುತ್ತಾರೆ. ರಾತ್ರಿ ಹೊತ್ತು ಜಮೀನಿನಲ್ಲಿ ಕಾದು ಕುಳಿತು ಪಟಾಕಿ ಸಿಡಿಸಿ ಹಂದಿಗಳಿಗೆ ಹೆದರಿಸುವ ಪ್ರಯತ್ನ ಎಫ್.ಎಂ ರೇಡಿಯೊ ಅಳವಡಿಸುತ್ತಾರೆ. ಬೊಂಬೆ ಕಟ್ಟುವುದು ಹೊಲಗಳಲ್ಲಿ ಟೈರ್‌ಗಳನ್ನು ಸುಡುವುದು ವಿದ್ಯುತ್ ಲೈಟ್ ಅಳವಡಿಸುವುದು ಮಾಡುತ್ತಾರೆ. ಕೆಲವರು ಗುಡಿಸಲು ಹಾಕಿಕೊಂಡು ರಾತ್ರಿಯಿಡೀ ಕಾವಲು ಕಾಯುತ್ತಾರೆ.