ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ₹ 58.69 ಕೋಟಿ ಬೆಳೆ ವಿಮೆ ಪರಿಹಾರ: ಭಗವಂತ ಖೂಬಾ

Last Updated 27 ಜುಲೈ 2021, 16:33 IST
ಅಕ್ಷರ ಗಾತ್ರ

ಬೀದರ್: 2020-21ನೇ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 1,01,160 ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಟ್ಟು ₹ 58.69 ಕೋಟಿ ಪರಿಹಾರ ಮಂಜೂರಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಜಿಲ್ಲೆಯ 1,93,256 ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು. ಅತಿವೃಷ್ಟಿಯಿಂದ ಬಹಳಷ್ಟು ರೈತರು ಬೆಳೆ ನಷ್ಟಕ್ಕೆ ಒಳಗಾಗಿದ್ದರು. ತಾವು ನಡೆಸಿದ ಪ್ರಯತ್ನದ ಫಲವಾಗಿ ವಿಮೆ ಪರಿಹಾರ ಮಂಜೂರಾಗಿದೆ. ಈಗಾಗಲೇ ರೈತರ ಖಾತೆಗೆ ಹಣ ಜಮಾ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನೋಂದಣಿ ಹಾಗೂ ಪರಿಹಾರ ಪಡೆಯುವಲ್ಲಿ ಬೀದರ್ ಜಿಲ್ಲೆ ಪ್ರತಿ ವರ್ಷವೂ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಈಗಾಗಲೇ ಪ್ರಧಾನಮಂತ್ರಿ ಅವರು ಜಿಲ್ಲೆಯಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನವನ್ನು ಪ್ರಶಂಶಿಸಿದ್ದಾರೆ ಎಂದು ತಿಳಿಸಿದಾರೆ.

ಯೋಜನೆ ರೈತರ ಆಪ್ತ ರಕ್ಷಕವಾಗಿದೆ. ಹೀಗಾಗಿ ಈ ವರ್ಷವೂ ರೈತರು ಹತ್ತಿರದ ಬ್ಯಾಂಕ್, ಸಿ.ಎಸ್.ಸಿ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಬೇಕು. ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT