ಶನಿವಾರ, ಜುಲೈ 31, 2021
25 °C
ಸೋನಾಳ-ಹೊರಂಡಿ ಪ್ರದೇಶದಲ್ಲಿ ಬೆಳೆ ಹಾಳು

ಕಮಲನಗರ: ಜಿಂಕೆ, ಕಾಡುಹಂದಿ ಕಾಟಕ್ಕೆ ಬೇಸತ್ತ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಸೋನಾಳ-ಹೊರಂಡಿ ಸುತ್ತಲಿನ ಪ್ರದೇಶದಲ್ಲಿ ಕಾಡುಹಂದಿ ಹಾಗೂ ಜಿಂಕೆಗಳ ಕಾಟದಿಂದಾಗಿ ರೈತರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ.

‘ಸೋನಾಳ ಭುಜಮಡ್ಡಿ ಸುತ್ತಲಿನ ಪ್ರದೇಶದಲ್ಲಿ ಜಿಂಕೆಗಳು ಬೆಳೆ ಹಾಳು ಮಾಡುತ್ತಿದ್ದು, ಇದೀಗ ಕಾಡುಹಂದಿಗಳೂ ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ’ ಎಂದು ಪ್ರಗತಿಪರ ರೈತ ಅಂಕುಶ ಹಣಮಶೆಟ್ಟಿ ತಿಳಿಸಿದ್ದಾರೆ.

‘ಹಂದಿಗಳ ಕಾಟದಿಂದಾಗಿ ರೈತರು ಚಿಂತಿತರಾಗಿದ್ದಾರೆ. ಬೆಳೆ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದರೂ ಹಂದಿಗಳ ಕಾಟ ತಡೆಯುವುದು ಸಾಧ್ಯವಾಗುತ್ತಿಲ್ಲ. ಹಂದಿಗಳ ಜೊತೆಗೆ ಜಿಂಕೆಗಳೂ ಬೆಳೆ ತಿಂದು ಹಾಳು ಮಾಡುತ್ತಿವೆ. ರೈತರ ಕಷ್ಟ ಹೆಚ್ಚಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹೊರಂಡಿ ಗ್ರಾಮದ ರೈತ ಶಾಲಿವಾನ ಬಿರಾದಾರ ದೂರಿದ್ದಾರೆ.

ಬೆಳೆ ಹಾನಿಯಿಂದ ಚಿಂತೆಗಿಡಾದ ರೈತರಿಗೆ ಅರಣ್ಯ ಅಧಿಕಾರಿ, ಸಿಬ್ಬಂದಿ ಸೂಕ್ತ ಕ್ರಮ ಕೈಗೊಂಡು ಸ್ಪಂದಿಸಬೇಕು. ನಿಯಮಾನುಸಾರವಾಗಿ ಸರ್ವೇ ಮಾಡಿ ರೈತರ ಬೆಳೆ ಹಾಳುಮಾಡಿದ್ದು ಪರಿಗಣಿಸಿ, ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಅವುಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು