ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ಗಾಂಧಿ ಗ್ರಾಮ ಪುರಸ್ಕಾರ: ಅಭಿವೃದ್ಧಿ ಕಾಮಗಾರಿಗೆ ಒಲಿದ ಗರಿ

Published 30 ಸೆಪ್ಟೆಂಬರ್ 2023, 4:59 IST
Last Updated 30 ಸೆಪ್ಟೆಂಬರ್ 2023, 4:59 IST
ಅಕ್ಷರ ಗಾತ್ರ

ವರದಿ : ಗುರುಪ್ರಸಾದ್ ಮೆಂಟೇ

ಹುಲಸೂರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡ ತಾಲ್ಲೂಕಿನ ಹುಲಸೂರ ಗ್ರಾಮ ಪಂಚಾಯಿತಿಗೆ 2022-23ನೇ ‘ಸಾಲಿನ ಗಾಂಧಿ ಗ್ರಾಮ ಪುರಸ್ಕಾರ’ ದೊರೆತಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 4,700 ಕುಟುಂಬಗಳಿದ್ದು, 18,300 ಕಿಂತ ಹೆಚ್ಚು ಜನಸಂಖ್ಯೆ ಇದೆ. ಪ್ರತಿ ಕುಟುಂಬವು ವೈಯುಕ್ತಿಕ ಶೌಚಾಲಯ ಹೊಂದಿದೆ ಹಾಗೂ ಬಳಕೆ ಮಾಡುತ್ತಿದ್ದಾರೆ. ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಗ್ರಾಮಸಭೆ, ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು, ಅಭಿವೃದ್ಧಿ ಕಾಮಗಾರಿಗಳ ಪಾರದರ್ಶಕ, ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ, ನರೇಗಾ ಯೋಜನೆಯ ಉತ್ತಮ ಪ್ರಗತಿ, ಗ್ರಾಮ ಆರೋಗ್ಯ ಯೋಜನೆ ಅಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ,ಕಂದಾಯ ವಸೂಲಿ, ಕುಡಿಯುವ ನೀರು ಪೂರೈಕೆ, ವಸತಿ ಯೋಜನೆಗಳಲ್ಲಿ ಗ್ರಾಮ ಪಂಚಾಯಿತಿ ಉತ್ತಮ ಸಾಧನೆ ತೋರಿದೆ.

ಗಾಂಧಿ ಗ್ರಾಮ ಪುರಸ್ಕಾರದಿಂದ ನಮ್ಮ ಉತ್ಸಾಹ ಹೆಚ್ಚಿದೆ. ಹುಲಸೂರನ್ನೂ ಸಂಪೂರ್ಣ ಸ್ವಚ್ಛ ಗ್ರಾಮವನ್ನಾಗಿ ರೂಪಿಸುವ ಗುರಿ ಇದೆ.
ಸಂದೀಪ ಬಿರಾದಾರ, ಹುಲಸೂರ ಪಿಡಿಒ

ಗ್ರಾಮ ಪಂಚಾಯಿತಿ ಯೋಜನೆಗಳು, ಅಭಿವೃದ್ಧಿ ಹಾಗೂ ವ್ಯವಹಾರದ ಸಮಗ್ರ ಮಾಹಿತಿಯನ್ನು ಪಂಚತಂತ್ರದ ವೆಬ್‌‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಆನ್‌ಲೈನ್‌ ಮೂಲಕ ಹಣದ ವ್ಯವಹಾರ ಮಾಡಲಾಗುತ್ತದೆ.

ನರೇಗಾದಡಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ. ಗಾಂಧಿ ಪುರಸ್ಕಾರ ದೊರೆತಿರುವುದು ಸಂತಸದ ತಂದಿದೆ.
ಸಂಜೀವ ಭೂಸಾರೆ, ಗ್ರಾ.ಪಂ. ಅಧ್ಯಕ್ಷ, ಹುಲಸೂರ

ಹುಲಸೂರ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಗೊಂಡಿದ್ದಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿ ಗ್ರಾಮಸ್ಥರೂ ಹರ್ಷ ವ್ಯಕ್ತ ಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಬೇಕೆಂದು ಗ್ರಾ.ಪಂ ಸದಸ್ಯ ಆನಂದ ದೇವಪ್ಪ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹುಲಸೂರ ಗ್ರಾ.ಪಂ. ಸರ್ಕಾರದ ಮಾನದಂಡಕ್ಕೆ ಅನುಗುಣವಾಗಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನವಾಗಿದೆ. ಪಂಚಾಯಿತಿ ಇನ್ನೂ ಉತ್ತಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಇದು ಪ್ರೇರಕವಾಗಿದ್ದು ಹೆಚ್ಚಿನ ಜವಾಬ್ದಾರಿ ನೀಡಿದೆ.
ಮಹದೇವ ಜಮ್ಮು, ಸಹಾಯಕ ನಿರ್ದೇಶಕರು, ನರೇಗಾ

ಆಯ್ಕೆಗೆ ಕಾರಣ ಇದು

ಕಡತಗಳ ನಿರ್ವಹಣೆ, ಕರವಸೂಲಿ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ, ಸಿಸಿ ರಸ್ತೆ, ಚರಂಡಿ, ನಾಲಾ-ಕೆರೆ ಹೂಳು ತೆರವು, ಸಕಾಲಕ್ಕೆ ಕುಡಿವ ನೀರು ಪೂರೈಕೆ , ಗ್ರಾಮ ಆರೋಗ್ಯ ಯೋಜನೆ ಅಡಿ ಉಚಿತ ಆರೋಗ್ಯ ತಪಾಸಣೆ, ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಡಿಜಿಟಲ್ ಗ್ರಂಥಾಲಯ, ನಿಯಮಿತವಾಗಿ ಗ್ರಾಮ ಸಭೆ, ವಾರ್ಡ್ ಸಭೆಗಳನ್ನು ನಡೆಸಿ ದೂರದೃಷ್ಟಿ ಯೋಜನೆಯನ್ನು ರೂಪಿಸಿದೆ.

ನರೇಗಾ ಯೋಜನೆ ಅಡಿ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಹೈಟೆಕ್ ಬಾಸ್ಕೆಟ್‌ಬಾಲ್‌ ಅಂಗಣ ನಿರ್ಮಿಸಿರುವುದು
ನರೇಗಾ ಯೋಜನೆ ಅಡಿ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಹೈಟೆಕ್ ಬಾಸ್ಕೆಟ್‌ಬಾಲ್‌ ಅಂಗಣ ನಿರ್ಮಿಸಿರುವುದು
ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾರ್ಡನ್ ಹಾಗೂ ಇಂಟರ್‌ಲಾಕ್‌ ನಿರ್ಮಿಸಿರುವುದು
ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾರ್ಡನ್ ಹಾಗೂ ಇಂಟರ್‌ಲಾಕ್‌ ನಿರ್ಮಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT