ಕಲಾವಿದ ಪೂರ್ಣಚಂದ್ರ ಮೈನಾಳೆ ಹಾಗೂ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ನಟಿ ಅಮೂಲ್ಯ ಹಾಡು ಹಾಡಿದರು
‘ಮಾತಾಡೋ ಮಾದೇಶ...’
‘ಐಸು ಮಾತಾಡ್ತಾ ಇದ್ದೀನಿ ಮಾತಾಡೋ ಮಾದೇಶ. ಕರೀರೋ ಐಸು ಅಂತ’ ಎಂದು ನಟಿ ಅಮೂಲ್ಯ ಅವರು ಹೇಳಿದಾಗ ಜನರ ಕರತಾಡನ ಮುಗಿಲು ಮುಟ್ಟಿತ್ತು. ನಮಸ್ಕಾರ ಬೀದರ್ ಎಂದು ಹೇಳುತ್ತಲೇ ವೇದಿಕೆಗೆ ಆಗಮಿಸಿದ ಅವರು ನಾಲ್ಕನೇ ಸಲ ನಾನು ಬೀದರ್‌ಗೆ ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸಲ ಬೀದರ್‌ಗೆ ಬಂದಿರುವೆ. ನನ್ನ ಪುಟ್ಟ ಮನಸ್ಸಿನಲ್ಲಿ ಬೀದರ್‌ಗೆ ಪುಟ್ಟ ಜಾಗ ಇದ್ದೇ ಇದೆ. ಕನ್ನಡ ಸಿನಿಮಾ ಕನ್ನಡತನ ಉಳಿಸಿ ಬೆಳೆಸಬೇಕು. ಬೀದರ್ ಡಿಸಿ ಆಗಿ ಹರ್ಷ ಗುಪ್ತಾ ಅವರು ಈ ಜಿಲ್ಲೆಯಲ್ಲಿ ಮಾಡಿರುವ ಕೆಲಸ ಸದಾ ನೆನಪಿನಲ್ಲಿ ಇರುತ್ತದೆ. ಅವರನ್ನು ಯಾರೂ ಮರೆಯಬೇಡಿ’ ಎಂದು ಕೋರಿದರು. ಗಾಯಕಿ ಐಶ್ವರ್ಯ ಅವರು ‘ಚೆಲುವಿನ ಚಿತ್ತಾರ’ ಸಿನಿಮಾದ ‘ಉಲ್ಲಾಸದ ಹೂಮಳೆ ಜಿನುಗುತಗತಿದೆ ನನ್ನಲ್ಲಿ’ ಎಂದು ಹಾಡಿದರು. ಅದಕ್ಕೆ ಅಮೂಲ್ಯ ದನಿಗೂಡಿಸಿ ಹೆಜ್ಜೆ ಹಾಕಿದರು.