ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಾರಪಳ್ಳಿ ಕೊಡುಗೆ: ಶಿವರಾಜಕುಮಾರ ಮೆಚ್ಚುಗೆ

ಶಾರದಾ ತರಬೇತಿ ಕೇಂದ್ರದಲ್ಲಿ ಹೊಲಿಗೆ ಯಂತ್ರ, ಸೀರೆ ವಿತರಣೆ
Last Updated 11 ಜನವರಿ 2023, 15:46 IST
ಅಕ್ಷರ ಗಾತ್ರ

ಬೀದರ್: ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು ಜಿಲ್ಲೆ ಹಾಗೂ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಚಲನಚಿತ್ರ ನಟ ಶಿವರಾಜಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪ್ರತಾಪನಗರದ ಡಿಸಿಸಿ ಬ್ಯಾಂಕ್‍ನ ಶಾರದಾ ತರಬೇತಿ ಕೇಂದ್ರಕ್ಕೆ ಪತ್ನಿ ಗೀತಾ ಅವರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಸೂರ್ಯಕಾಂತ ನಾಗಮಾರಪಳ್ಳಿ ಅವರು ನನಗೆ ಸಹೋದರ ಇದ್ದ ಹಾಗೆ. ಅಪ್ಪುನ ಎಲ್ಲ ಗುಣಗಳು ಅವರಲ್ಲಿ ಇವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಸಹಾರ್ದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲ ಅಭ್ಯರ್ಥಿಗಳು ಸುಖಕರ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಅಣ್ಣನವರ ಕುಟುಂಬವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಪುನೀತ್ ರಾಜಕುಮಾರ ಅವರು ಹಿಂದೆ ನಮ್ಮ ಸಂಸ್ಥೆಗಳಿಗೆ ಭೇಟಿ ಕೊಟ್ಟಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶಿವರಾಜಕುಮಾರ ದಂಪತಿ ಹೊಲಿಗೆ ಯಂತ್ರ, ಸೀರೆ ಹಾಗೂ ಮೆಕಪ್ ಕಿಟ್‍ಗಳನ್ನು ವಿತರಿಸಿದರು.

ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸದಸ್ಯರಾದ ಶಿವಕುಮಾರ ಕಟ್ಟೆ, ಬಾಬುರಾವ್ ದಾನಿ, ಅಶೋಕ ಮಹಾಲಿಂಗ, ವಿಜಯಕುಮಾರ ಹೂಗಾರ, ಜುಬೇರ್ ದೈಮಿ, ಅಣ್ಣೆಪ್ಪ ಪಾಟೀಲ ಅವರು ಶಿವರಾಜಕುಮಾರ ದಂಪತಿಗೆ ಬೃಹತ್ ಹೂಮಾಲೆ ಹಾಕಿ ಗೌರವಿಸಿದರು.

ಮಾಜಿ ಶಾಸಕ ಅಶೋಕ ಖೇಣಿ, ಭೀಮರಾವ್, ಪಾಟೀಲ ಡಿಗ್ಗಿ, ಮಾಧವರಾವ್ ಪಾಟೀಲ, ಜಿ.ಎನ್. ಸಹಕಾರ ಆಸ್ಪತ್ರೆಯ ನಿರ್ದೇಶಕ ತರುಣ ನಾಗಮಾರಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT