ಶನಿವಾರ, ಜೂನ್ 25, 2022
24 °C
ಶಾಸಕ, ಸಂಸದರ ಮಾದರಿ ಜನ್ಮದಿನಾಚರಿಸಿದ ಅಭಿಮಾನಿಗಳು

ಆಶಾ, ಆರೋಗ್ಯ ಸಿಬ್ಬಂದಿಗೆ ಸೀರೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಕೋವಿಡ್ ಕಾರಣ ಶಾಸಕ ಶರಣು ಸಲಗರ ಮಂಗಳವಾರ ತಮ್ಮ ಜನ್ಮದಿನದ ಅಂಗವಾಗಿ ಯಾವುದೇ ಚಟುವಟಿಕೆ ಹಮ್ಮಿಕೊಳ್ಳಲಿಲ್ಲ. ಆದರೂ, ಅವರ ಅಭಿಮಾನಿ ಬಳಗದವರು ಹಾಗೂ ಬೆಂಬಲಿಗರು ಸೀರೆ, ಊಟ ವಿತರಿಸುವ ಹಾಗೂ ಸಸಿ ನೆಡುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದರು.

ಕೊಹಿನೂರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ 80 ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಸೀರೆ, ಸಿಹಿ, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು. ಮುಖಂಡರಾದ ರಾಜಕುಮಾರ ಶಿರಗಾಪುರ, ರತಿಕಾಂತ ಕೊಹಿನೂರ, ಸತೀಶ ಪಾಟೀಲ, ಶಿವಶರಣಪ್ಪ ಸಂತಾಜಿ, ಅನಿಲ ಮಣಕೋಜಿ, ಸತೀಶ ಮಾಡೋಳೆ, ಆಕಾಶ ಪಾಟೀಲ, ಭೀಮಾಶಂಕರ ಪಾಟೀಲ, ಅಜಯ ಬಿರಾದಾರ ಪಾಲ್ಗೊಂಡಿದ್ದರು.

ಸಾವಿರ ಜನರಿಗೆ ಆಹಾರ ವಿತರಣೆ

ಶಾಸಕ ಶರಣು ಸಲಗರ ಹಾಗೂ ಸಂಸದ ಭಗವಂತ ಖೂಬಾ ಜನ್ಮದಿನದ ಪ್ರಯುಕ್ತ ಯುವ ಮುಖಂಡರಾದ ಸಂಜೀವ ಸುಗೂರೆ, ಸಿದ್ದು ಬಿರಾದಾರ, ಬಸವರಾಜ ಮುಸ್ತಾಪುರೆ ಅವರು 1000 ಜನರಿಗೆ ಊಟದ ಪೊಟ್ಟಣ, ನೀರಿನ ಬಾಟಲ್ ವಿತರಿಸಿದರು. ಸಾಗರ ಕುಲಕರ್ಣಿ, ಜಗದೀಶ ಅಂಬುಲಗೆ, ಅರುಣ ವಾಲಿ, ಸಾಗರ ಸುಗೂರೆ ಉಪಸ್ಥಿತರಿದ್ದರು.

ಸಸಿ ನೆಡುವಿಕೆ: ಬಿಜೆಪಿ ನಗರ ಘಟಕದಿಂದ ಬಡ ಜನತೆಗೆ ಆಹಾರಧಾನ್ಯ ವಿತರಿಸಿ ಹಾಗೂ ಅವರ ಮನೆಗಳ ಮುಂದೆ ಒಂದೊಂದು ಸಸಿ ನೆಟ್ಟು ಸಂಸದ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ಜನ್ಮದಿನ ಆಚರಿಸಲಾಯಿತು. ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಮುಖಂಡರಾದ ದೀಪಕ ಗಾಯಕವಾಡ, ಅರವಿಂದ ಮುತ್ತೆ ಪಾಲ್ಗೊಂಡಿದ್ದರು.

ಸನ್ಮಾನ: ತಾಲ್ಲೂಕಿನ ಮಂಠಾಳದಲ್ಲಿ ಶಾಸಕ ಶರಣು ಸಲಗರ ಜನ್ಮದಿನದ ಪ್ರಯುಕ್ತ ಸಬ್ ಇನ್‌ಸ್ಪೆಕ್ಟರ್ ಜಯಶ್ರೀ ಹೂಡಲ್ ಹಾಗೂ ಠಾಣೆ ಸಿಬ್ಬಂದಿ, ಹೋಬಳಿ ಮಟ್ಟದ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರನ್ನು ಸನ್ಮಾನಿಸಿ, ಮಾಸ್ಕ್ ಸ್ಯಾನಿಟೈಸರ್, ಊಟ ವಿತರಿಸಲಾಯಿತು.

ಮುಖಂಡ ಶಿವಕುಮಾರ ಶೆಟಗಾರ, ಆನಂದ ಪಾಟೀಲ ಯಲ್ಲದಗುಂಡಿ, ರಾಜಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು