ಭಾಲ್ಕಿ: ಸುರಕ್ಷಿತ ಹಾಗೂ ಆರೋಗ್ಯಕರ ಜೀವನ ಸಾಗಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಬೇಕು ಎಂದು ಡಿವೈಎಸ್ಪಿ ಡಾ.ದೇವರಾಜ ಬಿ. ಸಲಹೆ ನೀಡಿದರು.

ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ಭಾಲ್ಕಿ ಪೊಲೀಸ್ ಉಪ ವಿಭಾಗ ಮತ್ತು ನಗರ ಪೊಲೀಸ್ ಠಾಣೆ ಸಹಯೋಗದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

ತಲೆಯೇ ನಮ್ಮ ದೇಹದ ಪ್ರಮಖ ಅಂಗವಾಗಿರುವುದರಿಂದ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಅಗತ್ಯ. ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳು ಬದಲಾದ ಮೋಟಾರ್ ವಾಹನ ನಿಯಮ ಅನುಸಾರ ಡಿಜಿಟಲೀಕರಣ ಮಾಡಿಕೊಂಡು, ತಪಾಸಣೆ ಸಂದರ್ಭದಲ್ಲಿ ಹಾಜರುಪಡಿಸುವುದು ಅವಶ್ಯಕವಾಗಿದೆ. ಅಲ್ಲದೇ, ಕೊರೊನಾ ನಿಯಂತ್ರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸುವುದು ಸೂಕ್ತ ಎಂದರು.

ನಾಟಕ ಪ್ರದರ್ಶನ: ಇದೇ ಸಂದರ್ಭದಲ್ಲಿ ವಿದ್ಯಾಭಾರತಿ ಪಬ್ಲಿಕ್ ಸ್ಕೂಲ್ ಮಕ್ಕಳು ರಸ್ತೆ ಸುರಕ್ಷತೆ ಕುರಿತು ಸಾದರ ಪಡಿಸಿದ ನಾಟಕಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಲ್ಮೆಟ್ ಧರಿಸಿದ ಸವಾರರಿಗೆ ಡಿವೈಎಸ್ಪಿ ಡಾ.ದೇವರಾಜ ಅವರು ಹೂ ನೀಡಿ ಅಭಿನಂದಿಸಿದರು.ಹೆಲ್ಮೆಟ್ ಧರಿಸದವರಿಗೆ ಇನ್ನು ಮುಂದೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾಭಾರತಿ ಪಬ್ಲಿಕ್ ಶಾಲೆ ಪ್ರಾಚಾರ್ಯ ರೋಹಿತ ವೈರಾಗೆ, ನಗರ ಠಾಣೆಯ ಪಿಎಸ್ಐ ಅಮರ ಕುಲಕರ್ಣಿ, ಎಸ್.ಎಲ್.ಪಟೇಲ್, ಗ್ರಾಮೀಣ ಠಾಣೆ ಪಿಎಸ್ಐ ಮಹೇಂದ್ರಕುಮಾರ, ಮೇಹಕರ ಠಾಣೆ ಪಿಎಸ್ಐ ನಂದಕುಮಾರ, ಅಮೃತ, ಹಂಸಕವಿ, ಮಾಣಿಕಪ್ಪ, ರಾಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.