ಪ್ರತಿಯೊಬ್ಬರೂ ನಿತ್ಯ ಯೋಗ ಧ್ಯಾನ ಮಾಡಬೇಕು. ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡಬೇಕು. ಸ್ಕ್ರೀನ್ ಎದುರು ಹೆಚ್ಚು ಸಮಯ ಕಳೆಯದಂತೆ ಎಚ್ಚರ ವಹಿಸಿದರೆ ಆರೋಗ್ಯದಿಂದ ಇರಬಹುದು. ಅತಿಯಾದ ಒತ್ತಡ ಬದಲಾದ ಜೀವನಶೈಲಿಯಿಂದಲೇ ಪಾರ್ಶ್ವವಾಯು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ
ಡಾ. ಪ್ರಶಾಂತ್ ಅಳ್ಳೆ ನರರೋಗ ತಜ್ಞ
ಹಿಂದುಳಿದ ಬೀದರ್ ಜಿಲ್ಲೆಯಲ್ಲಿ ಇದುವರೆಗೆ ನರರೋಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ ಇತ್ತು. ಈಗ ಅದು ನೀಗಿದೆ. ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸಾ ಸೌಲಭ್ಯ ಲಭ್ಯ ಇರುವುದರಿಂದ ಜನ ಮಹಾನಗರಗಳಿಗೆ ಹೋಗಬೇಕಿಲ್ಲ. ವೈದ್ಯಲೋಕದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗುವುದು ಬಹಳ. ಪ್ರತಿಯೊಂದು ನಿಮಿಷವೂ ಮುಖ್ಯ
ಡಾ. ಚಂದ್ರಕಾಂತ ಗುದಗೆ ಸಂಸ್ಥಾಪಕ ಅಧ್ಯಕ್ಷ ಗುದಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ