‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಶುಂಠಿ ಖರೀದಿಗೆ ಅನುಮತಿ ಕೋರಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕೇಂದ್ರ ಅನುಮತಿ ನೀಡಿದರೆ ನೋಡೆಲ್ ಸಂಸ್ಥೆಯು ರೈತರಿಂದ ಬೆಂಬಲ ಬೆಲೆಯಡಿ ಶುಂಠಿ ಖರೀದಿ ಮಾಡಲಿದೆ.
–ಸಿದ್ದರಾಜು, ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ
ರಫ್ತಿನ ಮೇಲೆ ನಿರ್ಬಂಧ
ದೇಶದಲ್ಲಿ ಬೆಳೆಯುವ ಬಹುಪಾಲು ಶುಂಠಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಪೂರೈಕೆಯಾಗುತ್ತದೆ. ಈಚೆಗೆ ಎರಡೂ ದೇಶಗಳಿಗೆ ಶುಂಠಿ ರಫ್ತು ನಿಂತಿರುವುದರಿಂದ ದರ ದಿಢೀರ್ ಕುಸಿತವಾಗಿದೆ. ಒಂದು ಎಕರೆ ಶುಂಠಿ ಬೆಳೆಯಲು 4 ರಿಂದ 5 ಲಕ್ಷ ಖರ್ಚು ಬರುತ್ತದೆ. ಸದ್ಯದ ದರದಲ್ಲಿ ಮಾರಾಟ ಮಾಡಿದರೆ ಶೇ 50ರಷ್ಟು ಖರ್ಚಿನ ಬಾಬ್ತು ಕೂಡ ಕೈಸೇರುವುದಿಲ್ಲ. ಶುಂಠಿ ಕೀಳಿಸದೆ ಹಾಗೆ ಬಿಟ್ಟರೆ ಬಿಸಿಲಿಗೆ ಒಣಗಿ ತೂಕ ಕಳೆದುಕೊಂಡು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಶುಂಠಿ ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.