ಗುರುವಾರ , ಅಕ್ಟೋಬರ್ 1, 2020
20 °C

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹನೂರು: ಬೆಳ್ಳಂಬೆಳಗ್ಗೆ ಬೀಸಿದ ಭಾರಿ ಗಾಳಿಗೆ  ರಸ್ತೆ ಬದಿಯಲ್ಲಿದ್ದ ಮರ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ರಾಮಯ್ಯನಕೆರೆ ಬಳಿ ಮಂಗಳವಾರ ಮುಂಜಾನೆ ಜರುಗಿದೆ.

ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಮುನಿಸ್ವಾಮಿ ಮತ್ತು ಕುಮಾರ ಎಂಬುವವರು ಗಾಯಗೊಂಡವರು. 
ಮುನಿಸ್ವಾಮಿ ಅವರು ಪಟ್ಟಣದಲ್ಲಿ ಲಾರಿ ಚಾಲಕರಾಗಿದ್ದು, ಮಂಗಳವಾರ ಎಂದಿನಂತೆ  ಕೆಲಸಕ್ಕೆ ತೆರಳುತ್ತಿದ್ದರು. ಇವರನ್ನು ಬಿಟ್ಟು ಬರಲು‌ ಕುಮಾರ ಎಂಬುವವರು ಜೊತೆಗೆ ಹೋಗಿದ್ದರು. ಪಟ್ಟಣದ ಹೊರವಲಯದಲ್ಲಿರುವ ರಾಮಯ್ಯನಕೆರೆ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ ಬದಿಯಲ್ಲಿದ್ದ ಆಲದ ಮರ ಏಕಾಏಕಿ ಇವರು ಹೋಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮುರಿದು ಬಿದ್ದಿದೆ. 

ಗಾಯಗೊಂಡು ನರಳುತ್ತಿದ್ದ ಇವರನ್ನು ಕಂಡ ಸ್ಥಳೀಯರು ಪಟ್ಟಣದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ ಮುನಿಸ್ವಾಮಿ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು