ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಮಯದಲ್ಲಿ ಅರಳಿದ ‘ವರ್ಲಿ’

ಹಸಿರು ಮತ್ತು ಚಿತ್ರಕಲೆಯಿಂದ ನಳನಳಿಸುತ್ತಿದೆ ಬಿಆರ್ಸಿ ಕೇಂದ್ರ
Last Updated 20 ಜನವರಿ 2021, 15:21 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿಆರ್‌ಸಿ) ಈಗ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.

ಪ್ರಾಚೀನ ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ವರ್ಲಿ ಕಲೆಯನ್ನು ಕೇಂದ್ರದ ಕಟ್ಟಡಗಳಿಗೆ ಅಲಂಕರಿಸಲಾಗಿದೆ. ಕೋವಿಡ್‌ ಸಮಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಕುಂಚದಿಂದ ಈ ಕಲೆಯ ಚಿತ್ತಾರ ಮೂಡಿದೆ. ಸಿಆರ್‌ಪಿ ಮತ್ತು ಬಿಆರ್‌ಪಿಗಳು ಒಟ್ಟಾಗಿಹಸಿರು ಪರಿಸರವನ್ನು ಆವರಣದಲ್ಲಿ ಸೃಷ್ಟಿಸಿದ್ದಾರೆ.

ಗೋಡೆಗಳ ಮೇಲೆ, ಸರಳ ರೇಖೆಯಲ್ಲಿ ಕೆಂಪು ಮತ್ತು ಬಿಳಿ ಎರಡು ವರ್ಣಗಳಿಂದ ವರ್ಲಿ ಕಲೆಯ ಚಿತ್ರಗಳು ಮೈದಾಳಿವೆ. ಗ್ರಾಮೀಣ ಪ್ರದೇಶದ ಸಂಸ್ಕೃತಿ, ದೈನಂದಿನ ಬದುಕಿಗೆಸಂಬಂಧಿಸಿದ ಚಿತ್ರಗಳಿಗೆ ಶಿಕ್ಷಕರು ಜೀವ ತುಂಬಿದ್ದಾರೆ.

ಬಿಆರ್‌ಸಿ ಕೇಂದ್ರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರಿಗೆತರಬೇತಿ ನೀಡುತ್ತದೆ. ವರ್ಷದುದ್ದಕ್ಕೂ ಇಲ್ಲಿ ವಿವಿಧವಿಷಯಗಳ ಕುರಿತು ತರಬೇತಿ ಪಡೆಯಲು ನೂರಾರು ಶಿಕ್ಷಕರು ನೆರೆಯುತ್ತಾರೆ. ಮಕ್ಕಳಕಲಿಕೆಯಲ್ಲಿ ಆಸಕ್ತಿ ತುಂಬುವಲ್ಲಿ, ಶಾಲೆಗಳ ಕಟ್ಟಡಗಳನ್ನು ಹೆಚ್ಚಿನ ಖರ್ಚು, ವೆಚ್ಚಇಲ್ಲದೆ ಸಿಂಗರಿಸಲು ಶಿಕ್ಷಕರಿಗೆ ಈ ಕಲೆ ನೆರವಾಗಿದೆ.

ಹಳ್ಳಿಗಳಲ್ಲಿ ಜನರು ಗುಡಿಸಲುಗಳ ಸುತ್ತ ಕೆಂಪು ಮಣ್ಣು ಬಳಿದು ಮನೆ ಅಂದಹೆಚ್ಚಿಸುತ್ತಿದ್ದರು. ಕಡ್ಡಿಗೆ ಹತ್ತಿ ಸುತ್ತಿ ಸುಣ್ಣದಲ್ಲಿ ಅದ್ದಿ, ಬಿಳಿ
ಚೌಕಾಕಾರದ ಭೂಮಿತಿ ರೇಖಾಕೃತಿಗಳನ್ನು ರಚಿಸುತ್ತಿದ್ದರು. ಜತೆಗೆ ಜನ ಜೀವನದಪರಂಪರೆಗಳನ್ನು ಅನಾವರಣ ಮಾಡುತ್ತಿದ್ದರು. ಇಂತಹ ಕಲೆಯನ್ನು ನಶಿಸದಂತೆ ಕಟ್ಟಡಗಳಲ್ಲಿಉಳಿಸಬೇಕಿದೆ ಎಂದು ಬಿಆರ್‌ಸಿ ಮಹೇಶ್ ಹೇಳಿದರು.

‘ಶಾಲಾ ಕಟ್ಟಡಗಳು ರೈಲು, ಬಸ್‌ಗಳಂತೆ ಗೋಚರಿಸುವ ಬದಲು ಚಿಣ್ಣರ ಮನಸ್ಸನ್ನು ಸುಲಭವಾಗಿ ಅರಳಿಸಲು ವರ್ಲಿ ಕಲೆ ಪ್ರಯೋಜನಕಾರಿ. ಎಳೆಯ ಮನಸ್ಸು ಉಲ್ಲಾಸ, ಉತ್ಸಾಹ ತುಂಬಿಕೊಂಡುಕಲಿಕೆಯಲ್ಲಿ ಸ್ಫೂರ್ತಿ ತುಂಬುತ್ತದೆ. ಅದೇ ರೀತಿ ಏಕಾಗ್ರತೆ, ಆಸಕ್ತಿ ಬೆಳೆಸುತ್ತದೆ ಎಂಬ ಪರಿಕಲ್ಪನೆ ಹೊಂದಲಾಗಿದೆ’ ಎಂದು ಬಿಆರ್‌ಪಿ ಮತ್ತು ಸಿಆರ್‌ಪಿಗಳಾದನಿಂಗರಾಜು, ಮಹೇಶ್, ರಾಧ, ರವಿ ಮತ್ತು ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗಳಿಗೆ ಭೇಟಿ ನೀಡಿದಾಗ ಮಕ್ಕಳಲ್ಲಿ ಸೃಜನಾತ್ಮಕ ಅಂಶಗಳನ್ನು ಬಿತ್ತುವ ರೀತಿಯಲ್ಲಿ ಶಾಲಾ ಕಟ್ಟಡದ ಅಂದ ಹೆಚ್ಚಿಸಿ ಎಂದೇ ಶಿಕ್ಷಕರಿಗೆ ಸಲಹೆ ನೀಡಲಾಗುತ್ತಿದೆ. ನಮ್ಮ ಕಚೇರಿಕಟ್ಟಡಗಳೂ ಬೋಧಕರಿಗೆ ಪ್ರೇರಣೆ ನೀಡುವಂತೆ ಇರಬೇಕು. ನಮ್ಮ ಕಲೆ ಸಂಸ್ಕೃತಿಯೂ ಶೈಕ್ಷಣಿಕ ಸಂದೇಶಗಳನ್ನು ಒಳಗೊಂಡಿದ್ದರೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಾಯಆಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿವಿ. ತಿರುಮಲಾಚಾರಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT