ಭಾನುವಾರ, ಜನವರಿ 16, 2022
28 °C

ನಂದಿಗಿರಿಧಾಮ: ಮೊದಲ ದಿನ ವಿರಳ ಸಂಖ್ಯೆಯಲ್ಲಿ ಪ್ರವಾಸಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಂದಿಗಿರಿಧಾಮ (ನಂದಿ ಬೆಟ್ಟ) ಬುಧವಾರದಿಂದ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿದ್ದು ಮೊದಲ ದಿನ ವಿರಳ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಬೆಳಿಗ್ಗೆ ಆರು ಗಂಟೆಯಿಂದಲೇ ಪ್ರವಾಸಿಗರು ಗಿರಿಧಾಮಕ್ಕೆ ಎಡತಾಕಿದರು. ಭೂ ಕುಸಿತವಾದ ಕಡೆಯೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಇಡೀ ಬೆಟ್ಟ ಹೇರಳವಾಗಿ ಮಂಜು ಹೊದ್ದಿದೆ. ವಾಹನಗಳ ಸಂಚಾರಕ್ಕೆ ಕಷ್ಟ ಎನ್ನುವ ರೀತಿಯಲ್ಲಿ ಮಂಜು ಇದೆ. ಮೊದಲದಿನವೇ ಬೆಂಗಳೂರಿನ ಕೆಲವರು ಗಿರಿಧಾಮಕ್ಕೆ ಸೈಕ್ಲಿಂಗ್ ಬಂದಿದ್ದಾರೆ.

ಮೊದಲ ದಿನವಾದ ಕಾರಣ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಂದಿಲ್ಲ. ಇನ್ನೂ ಪ್ರಚಾರವಾಗಬೇಕಿದೆ. ಹಂತ ಹಂತವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಫೋಟೊಶೂಟ್‌ಗೂ ಅವಕಾಶವಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು