ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಅಪರೂಪದ ಉಡುಗೊರೆ ನೀಡುವುದಾಗಿ ತಿಳಿಸಿ ಮತದಾರರಿಂದ ವಿಳಾಸ ಪಡೆಯಿರಿ ಎಂದು ತಮ್ಮ ಟ್ರಸ್ಟ್ ಸಿಬ್ಬಂದಿಗೆ ಕಳುಹಿಸಿದ ಧ್ವನಿ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಎಡೆ ಮಾಡಿದೆ.

ಸುಧಾಕರ್ ಅವರು ತಮ್ಮ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿಗೆ ನೀಡಿದ್ದಾರೆ ಎನ್ನಲಾದ ಸೂಚನೆಯ ಸಂದೇಶದಲ್ಲಿ ಕ್ಷೇತ್ರದ ಪ್ರತಿಯೊಂದು ಮನೆಯ ವಿಳಾಸ ದೂರವಾಣಿ ಪಡೆಯುವಂತೆ ತಿಳಿಸಲಾಗಿದೆ.

ಮನೆ ಮಂದಿ ಎಲ್ಲ ಬಳಸಬಹುದಾದಂತಹ ಉಡುಗೊರೆ ನೀಡಲಾಗುತ್ತದೆ. ಅದಕ್ಕಾಗಿ ಬಿಲ್ ಮಾಡಿಸಲು ವಿಳಾಸ ದೂರವಾಣಿ ಬೇಕು ಎಂದು ಮತದಾರರಿಂದ ಪಡೆಯಬೇಕು. ನಾಮಪತ್ರ ಸಲ್ಲಿಸುವ ದಿನದ ಎರಡು ದಿನ ಮುಂಚಿತವಾಗಿ ಈ ಕೆಲಸ ಮಾಡಬೇಕು ಎಂದು ಟ್ರಸ್ಟ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಚುನಾವಣೆ ಮುಗಿದ ಬಳಿಕ ನಿಮಗೆ ಉತ್ತಮ ಪ್ರವಾಸ ಆಯೋಜಿಸುವ ಜತೆಗೆ ಒಂದು ತಿಂಗಳ ಹೆಚ್ಚುವರಿ ಸಂಬಳ ಬೋನಸ್ ಆಗಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ಈ ಚುನಾವಣೆಗಾಗಿ ಹಗಲಿರುಳು ಶ್ರಮಿಸಬೇಕು ಎಂದು ಸಿಬ್ಬಂದಿಗೆ ಕೂಡ ಆಮಿಷ ಒಡ್ಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.