ಸಂಸ್ಕಾರದಿಂದ ಧಾರ್ಮಿಕ ಪ್ರಜ್ಞೆ: ಮಹದೇವಯ್ಯ

ಜೋಗಿಮಕ್ಕಿ(ಎನ್.ಆರ್.ಪುರ): ಮನುಷ್ಯ ಹುಟ್ಟಿನಿಂದ ಮರಣದವರೆಗೆ 16 ಸಂಸ್ಕಾರಗಳನ್ನು ಮಾಡಬೇಕಿದ್ದು ಬ್ರಾಹ್ಮಣರು ಎಲ್ಲಾ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗಿ ಮುಂದಿನ ಯುವ ಜನಾಂಗಕ್ಕೆ ಹಸ್ತಾಂತರಿಸ ಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಮಹದೇವಯ್ಯ ತಿಳಿಸಿದರು.
ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಮಕ್ಕಿಯ ಜಗದೀಶ್ ಮನೆ ಆವರಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಯುವ ಬಳಗದ ಆಶ್ರಯದಲ್ಲಿ ಜೋಗಿಮಕ್ಕಿ ಚಂದ್ರಶೇಖರಯ್ಯ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ನಾವು ಮತ್ತು ಸಂಸ್ಕಾರ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಶಾರದ ಪೀಠದ ಜಗದ್ಗುರುಗಳ ಸಲಹೆಯಂತೆ ಗಾಯತ್ರಿ ಜಪ ಮತ್ತು ಲಲಿತಾ ಸಹಸ್ರನಾಮ ಮಾಡುತ್ತಿರುವುದು ಸಮುದಾಯದವರಿಗೆ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವಲ್ಲಿ ನೆರವಾಗಿದೆ ಎಂದರು.
ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗಕೋಟೆತೋಟ ಮಾತನಾಡಿ,ಪ್ರತಿ ದಿನವೂ ಸಂಧ್ಯಾವಂದನೆ, ದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡುವುದು ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ನರಸಿಂಹರಾಜಪುರ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಸೇತುವೆಮನೆ ಸುಬ್ರಹ್ಮಣ್ಯ ವಹಿಸಿದ್ದರು.
ಮುಖಂಡರಾದ ಜೋಗಿಮಕ್ಕೆ ಜಗದೀಶ್,ಕೆರೆಮನೆ ಗೋಪಾಲಕೃಷ್ಣ,ಚೈತ್ರಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.