ಕಡೂರು: ‘ವಸತಿ ಶಾಲೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಪಾಲಿನ ಕಲ್ಪವೃಕ್ಷವಾಗಿದ್ದು, ಬೋಧಕರು ಮತ್ತು ಮೇಲ್ವಿಚಾರಕರು ಅವರ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು’ ಎಂದು ಶಾಸಕ ಕೆ.ಎಸ್ ಆನಂದ್ ಸೂಚಿಸಿದರು.

ತಾಲ್ಲೂಕಿನ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ, ವಸತಿ ಶಾಲೆಯ ಕುಂದುಕೊರತೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರವು ವಿವಿಧ ವಿಭಾಗಗಳಡಿ ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ, ಅಟಲ್ ಬಿಹಾರಿ ವಾಜಪೇಯಿ, ಅಲ್ಪಸಂಖ್ಯಾತ, ಅಲೆಮಾರಿ ಮೊದಲಾದ ವಸತಿ ಶಾಲೆಗಳ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಹಲವು ಸುಧಾರಣೆ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಮೇಲ್ವಿಚಾರಕರು ಮತ್ತು ಬೋಧಕ ವರ್ಗ ಶ್ರಮಿಸಬೇಕು. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಬಗೆಗಿನ ಕಾಳಜಿಯೂ ಅತಿಮುಖ್ಯವಾಗಲಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಸತಿ ಶಾಲೆಗಳು ಶ್ರಮಿಸುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿ ಕಲ್ಪಿಸುತ್ತಿವೆ ಎಂದು ಶ್ಲಾಘಿಸಿದರು.

ದ್ವಿತೀಯ ಪಿ.ಯು ವಿದ್ಯಾರ್ಥಿಗಳು, ಶಾಸಕರ ಬಳಿ ರಾಜ್ಯ ಸರ್ಕಾರ ಕಂಪ್ಯೂಟರ್ ಟ್ಯಾಬ್ ನೀಡಿದ್ದರೂ ಬೋಧಕ ವರ್ಗದವರು ನಮಗೆ ವಿತರಿಸಿಲ್ಲ. ನಮ್ಮ ಕ್ರೀಡಾ ಚಟುವಟಿಕೆಗಳಿಗೂ ಸಹಕರಿಸುತ್ತಿಲ್ಲ ಎಂದು ದೂರಿದರು.

ಉಪನ್ಯಾಸಕರೊಂದಿಗೆ ಚರ್ಚಿಸಿದ ಶಾಸಕರು, ‘ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾದ ತಾಂತ್ರಿಕ ಉಪಕರಣಗಳನ್ನು ಮೊದಲು ವಿತರಿಸಿ, ಶಿಕ್ಷಣದಷ್ಟೇ ಆದ್ಯತೆ ಕ್ರೀಡೆಗೂ ನೀಡಬೇಕು. ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡು ದೈಹಿಕವಾಗಿ ಸಬಲರಾದರೆ ಬೌದ್ಧಿಕ ಸಾಮರ್ಥ್ಯವೂ ವೃದ್ಧಿಗೊಳ್ಳಲಿದೆ. ಮಕ್ಕಳಿಗೆ ಆಟೋಟ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಬೇಕಿಲ್ಲ’ ಎಂದು ತಿಳಿಸಿದರು.

‘ಟ್ಯಾಬ್ಗಳಲ್ಲಿ ಮಕ್ಕಳು ಬೇರೆ ಸಿಮ್ ಹಾಕಿ ಬಳಸುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆ ಅವುಗಳನ್ನು ಹಿಂಪಡೆದಿದ್ದು, ಪೂರಕ ಪಠ್ಯ ವಿಷಯಗಳನ್ನು ಅಳವಡಿಸಿ ನೀಡಲಾಗುವುದು’ ಎಂದು ಬೋಧಕ ವರ್ಗದವರು ಸಮಜಾಯಿಷಿ ನೀಡಿದರು.

ಭೌತಶಾಸ್ತ್ರ ವಿಷಯದ ಪಾಠ ಕಲಿಕೆಯ ತರಗತಿಯಲ್ಲಿ ತಲ್ಲೀನರಾಗಿದ್ದ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಜತೆ ಶಾಸಕ ಕೆ.ಎಸ್.ಆನಂದ್ ಹಾಗೂ ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಡೆಸ್ಕ್ನಲ್ಲಿ ಕುಳಿತು ಉಪನ್ಯಾಸಕಿ ಬೋಧಿಸುತ್ತಿದ್ದ ವಿಷಯವನ್ನು ಆಲಿಸಿ, ಬಳಿಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಬೆರೆತು, ಸರ್ಕಾರದ ಯೋಜನೆಗಳ ಮತ್ತು ಸಾಮಾಜಿಕ ಆಗುಹೋಗುಗಳ ವಿಷಯದ ಕುರಿತು ಪ್ರಶ್ನೆಗಳನ್ನು ಕೇಳಿದರು.

ಶಾಸಕರ ಭೇಟಿಯ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪೋಷಕರು, ‘ಶಾಲೆಯ ಶಿಕ್ಷಕರು, ಮೇಲ್ವಿಚಾರಕರಿಗೆ ಹಾಗೂ ಅಧಿಕಾರಿಗಳಿಗೆ ಸ್ಥಳೀಯ ಸಂಘಟನೆಯ ಹೆಸರು ಬಳಸಿಕೊಂಡು ಕೆಲವು ಖಾಸಗಿ ವ್ಯಕ್ತಿಗಳು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ವಸತಿ ಶಾಲೆಯಲ್ಲಿ ಏನಾದರೂ ಸಂಭವಿಸಿದರೆ ಅದನ್ನು ಪ್ರಶ್ನಿಸುವುದು ಪೋಷಕರ ಹಕ್ಕು. ಆದರೆ, ಇಲ್ಲಿಗೆ ಬರುವ ಆಹಾರ ಪದಾರ್ಥಗಳನ್ನು ನೋಡಲು ಖಾಸಗಿಯವರಿಗೇನು ಅಧಿಕಾರವಿದೆ? ಸರ್ಕಾರ ನೀಡುವ ದಿನಸಿ ಪದಾರ್ಥಗಳನ್ನು ವಸತಿ ನಿಲಯದ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಖಾಸಗಿ ವ್ಯಕ್ತಿಗಳ ಮಧ್ಯಪ್ರವೇಶದಿಂದ ವಸತಿ ಶಾಲೆಗಳಿಗೆ ಕೆಟ್ಟ ಹೆಸರು ಬರುತ್ತಿದ್ದು ಇದನ್ನು ನಿಯಂತ್ರಿಸಿ, ಕಡಿವಾಣ ಹಾಕಬೇಕಿದೆ’ ಎಂದು ಶಾಸಕರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ವಸತಿ ನಿಲಯದ ಮೇಲ್ವಿಚಾರಕರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಕರ್ತವ್ಯಕ್ಕೆ ಅಡ್ಡಿಪಡಿಸುವ ಸ್ಥಳೀಯ ಸಂಘಟನೆಯ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವ ವಸತಿ ನಿಲಯದ ಸಿಬ್ಬಂದಿಯ ಮೇಲೆ ನಿಗಾವಹಿಸಿ, ಪ್ರತಿನಿತ್ಯ ಪೊಲೀಸ್ ಗಸ್ತು ನೀಡುವಂತೆ ಹಾಗೂ ನಿಲಯದ ಯಾವ ಸಿಬ್ಬಂದಿ ಇಲ್ಲಿನ ವಹಿವಾಟಿನ ಬಗ್ಗೆ ಹೊರಗಿನವರಿಗೆ ವಿಷಯ ತಿಳಿಸುತ್ತಾರೋ ಅಂತಹವರ ಸಂಪೂರ್ಣ ಕರೆ ವಿವರ ತೆಗೆದು ಪರಿಶೀಲಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೀರೂರು ಪಿಎಸ್ಐ ತಿಪ್ಪೇಶ್ ಅವರಿಗೆ ಸೂಚಿಸಿದರು.

ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಾಮನಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್, ವಸತಿ ನಿಲಯದ ಮೇಲ್ವಿಚಾರಕಿ ವೀಣಾ, ಮುಖಂಡ ಕಾಮನಕೆರೆ ಪಂಚಾಕ್ಷರಿ, ವಸತಿ ಶಾಲೆಯ ಶಿಕ್ಷಕರಾದ ಅಭಿಷೇಕ್, ಜಗದೀಶ್, ಯಲ್ಲಪ್ಪ, ಸಂತೋಷ್, ಪಿಎಸ್ಐ ಸಜಿತ್ಕುಮಾರ್ ಜಿ.ಆರ್, ತಿಪ್ಪೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.