ಕಡೂರು: ನಾಫೆಡ್ ವತಿಯಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಜೂನ್ 30ಕ್ಕೆ ಕೊನೆ ದಿನವಾಗಿದ್ದು, ನೋಂದಾಯಿಸಿಕೊಂಡವರು ನಿಗದಿತ ದಿನಗೊಳಗೆ ರಾಗಿ ಖರೀದಿ ಕೇಂದ್ರದಲ್ಲಿ ಧಾನ್ಯ ಮಾರಾಟ ಮಾಡಬೇಕು ಎಂದು ಖರೀದಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು ತಾಲ್ಲೂಕಿನಲ್ಲಿ 5, ಚಿಕ್ಕಮಗಳೂರಿನಲ್ಲಿ 1, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ತಲಾ 1 ಖರೀದಿ ಕೇಂದ್ರ ಆರಂಭಿಸಲಾಗಿತ್ತು. 18,453 ರೈತರು ನೋಂದಾಯಿಸಿಕೊಂಡಿದ್ದು, ಇದುವರೆಗೆ 16,529 ರೈತರು ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ್ದಾರೆ ಎಂದು ನಾಫೆಡ್ ಅಧಿಕಾರಿ ಬಾಗಪ್ಪ ಕಟ್ಟೀಮನಿ ತಿಳಿಸಿದರು.

ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ 2, ಕಡೂರಿನಲ್ಲಿ 2 ಮತ್ತು ಬೀರೂರಿನಲ್ಲಿ ಒಂದು ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಿವೆ. ಪಂಚನಹಳ್ಳಿಯಲ್ಲಿ 3,840 ರೈತರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 3,466 ಮಂದಿ 62,239 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದಾರೆ. ಕಡೂರಿನಲ್ಲಿ ನೋಂದಾಯಿಸಿಕೊಂಡ 6,910 ರೈತರ ಪೈಕಿ 6,131 ರೈತರು 1.06 ಲಕ್ಷ ಕ್ವಿಂಟಲ್, ಬೀರೂರಿನಲ್ಲಿ ನೋಂದಾಯಿಸಿಕೊಂಡ 1,937 ರೈತರಲ್ಲಿ 1,713 ರೈತರು 29,789 ಕ್ವಿಂಟಲ್ ರಾಗಿಯನ್ನು ಬೆಂಬಲಬೆಲೆಯಲ್ಲಿ ಮಾರಾಟ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ 998 ರೈತರಲ್ಲಿ 951 ಮಂದಿ 15,471 ಕ್ವಿಂಟಲ್, ತರೀಕೆರೆಯಲ್ಲಿ 15,59 ರೈತರಲ್ಲಿ 1,423 ರೈತರು 26,134 ಕ್ವಿಂಟಲ್, ಅಜ್ಜಂಪುರದಲ್ಲಿ 3,219 ರೈತರ ಪೈಕಿ 2,845 ರೈತರು 50,106 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ 3.04ಲಕ್ಷ ಕ್ವಿಂಟಲ್ ರಾಗಿ ಖರೀದಿ ಗುರಿ ಹೊಂದಲಾಗಿತ್ತು, ಇದುವರೆಗೆ 2.90ಲಕ್ಷ ಕ್ವಿಂಟಲ್ ರಾಗಿ ಖರೀದಿಸಿದ್ದು, ಅದರ ಮೌಲ್ಯ ₹ 124.55 ಕೋಟಿಯಾಗಿದೆ. ಮಾರ್ಚ್ನಿಂದ ಖರೀದಿ ಆಂಭಗೊಂಡಿದ್ದು, ಜೂನ್ ತಿಂಗಳಲ್ಲಿ ಖರೀದಿ ಮಾಡಿದ ರಾಗಿಗೆ ಮಾತ್ರ ಹಣ ಪಾವತಿಯಾಗಬೇಕಿದೆ. ಸದ್ಯದಲ್ಲೇ ಅವರಿಗೂ ಹಣ ಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಬಾರಿ ರೈತರು ರಾಗಿ ಮಾರಾಟ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡರೂ ಖರೀದಿ ನಿರೀಕ್ಷೆಯಷ್ಟು ಆಗಿರಲಿಲ್ಲ. ಈ ಬಾರಿ ನಾಫೆಡ್ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೈತರಿಗೆ ಸರ್ಕಾರವು ರಾಗಿ ಬೆಳೆಗೆ ಉತ್ತಮ ಧಾರಣೆಯನ್ನೇ ನೀಡಿದ್ದು ಕ್ವಿಂಟಲ್ಗೆ ₹ 4,290 ನಿಗದಿಪಡಿಸಲಾಗಿತ್ತು. ಈ ರೀತಿ ಕನಿಷ್ಠ ಬೆಂಬಲ ಬೆಲೆ ಸಮಾಧಾನಕರವಾಗಿದ್ದರೆ ಮತ್ತು ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆತರೆ ಕೃಷಿಕರ ಬದುಕೂ ಹಸನಾಗಬಹುದು ಎಂದು ಚಿಕ್ಕಬಳ್ಳೇಕರೆಯ ರೈತ ನಾಗರಾಜ್ ಹೇಳಿದರು.

Highlights - ಶೇ 95ರಷ್ಟು ಖರೀದಿ ಪೂರ್ಣ ಶೇ 70ರಷ್ಟು ಹಣ ಪಾವತಿ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ರಾಗಿ ಖರೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.