ನರಸಿಂಹರಾಜಪುರ (ಚಿಕ್ಕಮಗಳೂರು): ‘ಕೆಪಿಎಸ್ ಶಾಲೆಗಳಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬುದು ತಪ್ಪು ಕಲ್ಪನೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

‘ಬರಗೂರು ರಾಮಚಂದ್ರಪ್ಪ ಅವರು ‘ಪ್ರಜಾವಾಣಿ’ಯಲ್ಲಿ ಬರೆದಿರುವ ಲೇಖನ ಓದಿದ್ದೇನೆ. ಕೆಪಿಎಸ್ ಶಾಲೆ ಸ್ಥಾಪನೆ ಮಾಡಿದಲ್ಲಿ ಯಾವುದೇ ಹಳ್ಳಿಯ ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಒಳ್ಳೆಯ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವುದೇ ತಪ್ಪೇ’ ಎಂದು ಅವರು ಪ್ರಶ್ನಿಸಿದರು.

ಎಸ್ಎಸ್ಎಲ್ಸಿ ಉತ್ತೀರ್ಣದ ಅಂಕವನ್ನು 33ಕ್ಕೆ ಇಳಿಸಿದ್ದರಿಂದ ಶಿಕ್ಷಣದ ಗುಣಮಟ್ಟ ಕುಗ್ಗದು. ಅಂಕ ಇಳಿಕೆಗೂ ಶಿಕ್ಷಣದ ಗುಣಮಟ್ಟಕ್ಕೂ ಸಂಬಂಧವಿಲ್ಲ. 625ಕ್ಕೆ 625 ಅಂಕ ಪಡೆಯುವ ವಿದ್ಯಾರ್ಥಿಗಳೂ ಇರುತ್ತಾರೆ. ಕೇರಳ, ಮೀಜೋರಾಂ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಉತ್ತೀರ್ಣದ ಅಂಕ 30 ಇದೆ ಎಂದರು.

‘ಕೇರಳಲ್ಲಿ ಎಸ್ಎಸ್ಎಲ್ಸಿ ಉತ್ತೀರ್ಣರಾದ ಬಹಳಷ್ಟು ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಶುಶ್ರೂಷಕಿಯರ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಬೇಕಲ್ಲವೇ, ಉದ್ಯೋಗ ಕೊಡುವುದರಿಂದ ಕುಟುಂಬದ ನಿರ್ವಹಣೆ ಸುಲಭವಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.