ಚಿಕ್ಕಮಗಳೂರು: ‘ವ್ಯಾಟ್ಸ್ ಆ್ಯಪ್’ನಲ್ಲಿ ಪರಿಚಯವಾದ ವ್ಯಕ್ತಿ ಕಳಿಸಿದ ಸಂದೇಶ, ವಿವರ ನಂಬಿ ತರೀಕೆರೆಯ ಶಿಕ್ಷಕಿಯೊಬ್ಬರು ಆನ್‌ಲೈನ್ ಮೂಲಕ ಹೂಡಿಕೆ ಮಾಡಿ ಎಂಟು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಶಿಕ್ಷಕಿಯ ಪತಿ ಟಿ.ಸಿ. ಕುಮಾರಸ್ವಾಮಿ ನಗರದ ಸಿಇಎನ್ (ಸೈಬರ್, ಆರ್ಥಿಕ ಹಾಗೂ ಮಾದಕ ವಸ್ತು) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಬ್ಬರು +60105662805 ಫೋನ್ ನಂಬರ್‌ನಿಂದ ಶಿಕ್ಷಕಿಯ ಫೋನ್‌ಗೆ ‘ವ್ಯಾಟ್ಸ್ ಆ್ಯಪ್’ನಲ್ಲಿ ಸಂದೇಶ ಕಳಿಸಿದ್ದಾರೆ. ‘ಕ್ಯಾಸಿನೊ’ ಎಂದು ಹೆಸರು ಪರಿಚಯಿಸಿಕೊಂಡಿದ್ದಾರೆ. ‘ಗೋಲ್ಡನ್ ಕೀ’ ಎಂಬ ಆ್ಯಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಹಣ ಹೂಡಿದರೆ ಚಿನ್ನದ ಬೆಲೆ ಹೆಚ್ಚಿದಂತೆ ಹೂಡಿಕೆ ಮೊತ್ತಕ್ಕೆ ಲಾಭಾಂಶ ಸಿಗುತ್ತದೆ ಎಂದು ವಿವರಿಸಿದ್ದಾರೆ.

ಶಿಕ್ಷಕಿ ಮತ್ತು ಅವರ ಪತಿ ಇಬ್ಬರೂ ‘ಕ್ಯಾಸಿನೊ’ ವಿವರಿಸಿದ್ದನ್ನು ನಂಬಿದ್ದಾರೆ. ‘ಗೋಲ್ಡನ್ ಕೀ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಶಿಕ್ಷಕಿಯು ತನ್ನ ಖಾತೆಯಿಂದ ಕ್ಯಾಸಿನೊ ನೀಡಿದ್ದ ಬ್ಯಾಂಕ್ ಖಾತೆ ಸಂಖ್ಯೆಗೆ ಮೊದಲ ಬಾರಿಗೆ ₹ 50 ಸಾವಿರ ಹಣ ವರ್ಗಾಯಿಸಿದ್ದಾರೆ. 2020ರ ಡಿಸೆಂಬರ್ 9 ರಿಂದ 17ರವರೆಗೆ ಒಟ್ಟು ಆರು ಲಕ್ಷ ಹಣ ಜಮೆ ಮಾಡಿದ್ದಾರೆ. ನಂತರ ಪತಿ ಕುಮಾರಸ್ವಾಮಿ ಮತ್ತು ಶಿಕ್ಷಕಿ ಖಾತೆಯಿಂದ ಮತ್ತೆ ₹ 2 ಲಕ್ಷ ಹಣವನ್ನು 2020ರ ಡಿಸೆಂಬರ್18ರಂದು ಜಮೆ ಮಾಡಿದ್ದಾರೆ. ಒಟ್ಟಾರೆ ದಂಪತಿ ಎಂಟು ಲಕ್ಷ ರೂಪಾಯಿ ಹಣವನ್ನ ಕ್ಯಾಸಿನೊ ಖಾತೆಗೆ ವರ್ಗಾಯಿಸಿದ್ದಾರೆ.

ಹೂಡಿಕೆ ಮೊತ್ತ ನಷ್ಟವಾಗಿದೆ ಎಂದು ಶಿಕ್ಷಕಿಗೆ ಡಿಸೆಂಬರ್ 24ರಂದು ವ್ಯಾಟ್ಸ್ ಆ್ಯಪ್‌ನಲ್ಲಿ ಸಂದೇಶ ಬಂದಿದೆ. ದಂಪತಿ ಇಬ್ಬರೂ ‘ವ್ಯಾಟ್ಸ್ ಆ್ಯಪ್’ ಸಂದೇಶ ಬಂದಿದ್ದ ಸಂಖ್ಯೆಗೆ ಫೋನ್ ಮಾಡಿದ್ದಾರೆ. ಕರೆಯನ್ನು ಸ್ವೀಕರಿಸಿಲ್ಲ. ‘ವ್ಯಾಟ್ಸ್ ಆ್ಯಪ್’ ಸಂಖ್ಯೆ ಈಗಲೂ ಚಲಾವಣೆಯಲ್ಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ವ್ಯಾಟ್ಸ್ ಆ್ಯಪ್‌ನಲ್ಲಿ ಬಂದ ಸಂದೇಶ ನಂಬಿ ಮೋಸ ಹೋದೆವು. ಹಣ ಹೂಡಿದಾಗ ಮೊದಲಿಗೆ ನಿಮಗೆ ₹ 50 ಸಾವಿರ ಲಾಭ ಬಂದಿದೆ ಎಂದು ತೋರಿಸಿ ನಂಬಿಸಿ ಮತ್ತಷ್ಟು ಹಣ ಹೂಡಿಕೆಮಾಡಿಸಿ ಮೋಸ ಮಾಡಿದ್ದಾರೆ. ಎಲ್ಲ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯುತ್ತದೆ. ಫೋನ್ ಸಂಖ್ಯೆ ಎಲ್ಲಿಯದು ಪರಿಶೀಲಿಸಿದಾಗ ಮಲೇಶಿಯಾದ್ದು ಎಂದು ತೋರಿಸುತ್ತಿದೆ’ ಎಂದು ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಐಟಿ ಕಾಯ್ದೆ 2008 ಹಾಗೂ ವಂಚನೆ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.