ತರೀಕೆರೆ: ದೋರನಾಳು ಗ್ರಾಮದಲ್ಲಿ 1976ರಲ್ಲಿ ಆರಂಭವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1,390 ಷೇರುದಾರರಿದ್ದು, 2024-25ನೇ ಸಾಲಿನಲ್ಲಿ ಸಂಘವು ₹10.05 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.

ತಾಲ್ಲೂಕಿನ ದೋರನಾಳು ಗ್ರಾಮದ ಸಂಘದ ಆವರಣದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಷೇರು ಮೊತ್ತ ₹1.01 ಕೋಟಿ ಇದ್ದು, ಸಂಘದ ಸದಸ್ಯರಿಗೆ ₹9.07 ಕೋಟಿ ಸಾಲ ನೀಡಲಾಗಿದೆ. ಸಿಡಿಸಿಸಿ ಬ್ಯಾಂಕ್ನಲ್ಲಿ ನಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ದೋರನಾಳು ಸಂಘಕ್ಕೆ ₹5 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ಸರ್ಕಾರ ಸಿಡಿಸಿಸಿ ಬ್ಯಾಂಕ್ಗೆ ನೀಡಬೇಕಾದ ₹90 ಕೋಟಿ ಸಹಾಯಧನ ಬಿಡುಗಡೆ ಮಾಡಿಲ್ಲ. ಈ ಕಾರಣದಿಂದ 2 ವರ್ಷಗಳಿಂದ ರೈತರಿಗೆ ಕೆಸಿಸಿ ಸಾಲ ನೀಡಲು ಸಾಧ್ಯವಾಗಿಲ್ಲ ಎಂದರು.

ಉಪಾಧ್ಯಕ್ಷೆ ಡಿ.ಎಸ್.ಪ್ರೇಮಾ, ನಿರ್ದೇಶಕರಾದ ಜಿ.ಎಸ್.ವಸಂತಕುಮಾರ್, ಡಿ.ಎಸ್.ಬಸವರಾಜು, ಡಿ.ಎನ್.ಶಿವರಾಜ್ ಕುಮಾರ್, ಎಸ್.ಸಿ.ಮಲ್ಲಿಕಾರ್ಜುನಪ್ಪ, ಡಿ.ಜಿ.ಸಂಕೇತ್, ರಾಜೇಶ್ವರಿ, ಡಿ.ಎಸ್.ವೆಂಕಟೇಶ್, ರಾಜಶೇಖರ್, ಡಿ.ಸೋಮಶೇಖರ್, ಜಿ.ಆರ್.ಈಶ್ವರಪ್ಪ, ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್. ವೆಂಕಟೇಶ್, ಸಿಇಒ ವೈ.ಕೆ.ಸಂಜಯ್, ಡಿ.ಎಸ್.ಪ್ರೇಮ, ರಾಜೇಶ್ವರಿ ರಾಜಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.