ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿಗ್ರಹ ಒಯ್ಯಲು ಅವಕಾಶ ನೀಡಲು ಆಗ್ರಹಿಸಿ ಧರಣಿ 

ಚಿಕ್ಕಮಗಳೂರು
Last Updated 13 ಅಕ್ಟೋಬರ್ 2019, 6:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶೋಭಾಯಾತ್ರೆ ಮೆರವಣಿಗೆಯಲ್ಲಿ ಗುರುದತ್ತಾತ್ರೇಯ ಶಿಲಾಮೂರ್ತಿ ಒಯ್ಯಲು ಅವಕಾಶ ನೀಡಬೇಕು ಎಂದು ಶ್ರೀರಾಮಸೇನೆ ಕಾರ್ಯಕರ್ತರು, ಮುಖಂಡರು ಮತ್ತು ದತ್ತ ಭಕ್ತರು ಧರಣಿ ನಡೆಸಿದರು.

‘ವಿಗ್ರಹ ಮೆರವಣಿಗೆಗೆ ಅವಕಾಶ ನೀಡದೆ ಸರ್ಕಾರ ದ್ರೋಹ ಮಾಡಿದೆ. ಗುರುದತ್ತಾತ್ರೇಯರಿಗೆ ಅವಮಾನ ಮಾಡಿದೆ. ಗುರುಗಳಿಗೆ ಗೌರವ ಸಲ್ಲುವವರೆಗೆ ತಲೆಗೂದಲು, ದಾಡಿ ಬೋಳಿಸಲ್ಲ, ಸನ್ಮಾನ ಸ್ವೀಕರಿಸಲ್ಲ ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಂಧರ ಕುಲಕರ್ಣಿ ಅವರು ಧರಣಿ ಸ್ಥಳದಲ್ಲಿ ಶಪಥ ಮಾಡಿದರು.

ಜಿಲ್ಲಾಡಳಿತ ಶಿಲಾವಿಗ್ರಹ ಒಯ್ಯಲು ಅವಕಾಶ ನೀಡಿಲ್ಲ, ಪ್ರತಿಭಟನಾರ್ಥವಾಗಿ ಮೌನ ಮೆರವಣಿಗೆ ಮಾಡುತ್ತೇವೆ. ಗುರುವಾರದಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT