ಹೊಸದುರ್ಗ: ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕೋತಿಗಳ ಹಾವಳಿಯಿಂದ ಬೇಸತ್ತ ಕಸಪ್ಪನಹಳ್ಳಿ ಹಾಗೂ ಗುಡ್ಡದನೇರಲಕೆರೆಯ ಗ್ರಾಮಸ್ಥರು ಗುಡ್ಡದ ನೇರಲಕೆರೆ ಪಂಚಾಯಿತಿ ಕಚೇರಿಗೆ ಶುಕ್ರವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ಕಸಪ್ಪನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ಮೂರು ವರ್ಷವಾಗಿದೆ. 200 ಮನೆಗಳಿರುವ ಗ್ರಾಮಸ್ಥರು ಶುದ್ಧ ಕುಡಿಯುವ ನೀರು ಸಿಗದೆ ತೊಂದರೆ ಎದುರಾಗಿದೆ. ನೀರು ತರಲು ಗುಡ್ಡದ ನೇರಲಕೆರೆ ಗ್ರಾಮಕ್ಕೆ 3 ಕಿ.ಮೀ. ಕ್ರಮಿಸಬೇಕು. ಸರಿಪಡಿಸುವಂತೆ ಹಲವು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಎಲ್ಲಿಯೂ ಚರಂಡಿ ವ್ಯವಸ್ಥೆಯೇ ಇಲ್ಲ. ನರೇಗಾ ಕಾಮಗಾರಿಗಳು ಜಿಪಿಎಸ್ ಫೋಟೊಗಳಿಗೆ ಮಾತ್ರ ಸೀಮಿತವಾಗಿವೆ. ಕೇಳಿದರೆ ಪಿಡಿಒ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಫೋನ್ ಕರೆಯನ್ನೂ ಸ್ವೀಕರಿಸುವುದಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕೋತಿಗಳ ಉಪಟಳ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ಆತಂಕದಿಂದಲೇ ಜೀವನ ನಡೆಸುತ್ತಿದ್ದಾರೆ. ಮನೆಗೆ ನುಗ್ಗುವ ಕೋತಿಗಳು, ಹೆಂಚು, ಮೊಬೈಲ್ ಒಡೆದುಹಾಕಿ, ಆಹಾರ ಸಾಮಗ್ರಿಗಳನ್ನು ಚೆಲ್ಲುತ್ತಿವೆ. ಕೋತಿಗಳ ಹಾವಳಿ ತಡೆಗೆ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

‘ಸಮಸ್ಯೆ ಬಗೆಹರಿಸುವಂತೆ ಪಿಡಿಒಗೆ ಕೇಳಿದರೆ ಅನುದಾನವಿಲ್ಲ ಎನ್ನುತ್ತಾರೆ. ಅಧ್ಯಕ್ಷರನ್ನು ಕೇಳಿದರೆ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಾರೆ. ಹೀಗಾದರೆ ನಮ್ಮ ನೋವಿಗೆ ಸ್ಪಂದಿಸುವವರು ಯಾರು? ಪಂಚಾಯಿತಿ ಕಾರ್ಯ ವೈಖರಿಯಾದರೂ ಏನು’ ಎಂದು ಕಸಪ್ಪನಹಳ್ಳಿ ಹಾಗೂ ಗುಡ್ಡದನೇರಲಕೆರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಶೀಘ್ರವೇ ದುರಸ್ತಿ’

ಕಸಪ್ಪನಹಳ್ಳಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಗುತ್ತಿಗೆದಾರರು ಅದನ್ನು ಪಂಚಾಯಿತಿ ವ್ಯಾಪ್ತಿಗೆ ನೀಡಿಲ್ಲ. ಆದರೂ ಅದನ್ನು ದುರಸ್ತಿ ಮಾಡಿ ಶೀಘ್ರದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಪಿಡಿಒ ಕುಮಾರ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು. ಕೋತಿ ಹಿಡಿಯುವವರಿಗೆ ತಿಳಿಸಲಾಗಿದೆ. ಇನ್ನು 15 ದಿನಗಳೊಳಗೆ ಕೋತಿ ಸೆರೆ ಹಿಡಿಯಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.