ಮೊಳಕಾಲ್ಮುರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿ ಮೊಳಕಾಲ್ಮುರು ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

‘ತಾಲ್ಲೂಕಿನಲ್ಲಿ ಒಟ್ಟು 33,898 ಮನೆಗಳ ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದ್ದು, 28,606 ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ಶೇ 84.4ರಷ್ಟು ಸಾಧನೆ ಮಾಡಲಾಗಿದೆ. ಇನ್ನೂ 4 ದಿನ ಬಾಕಿ ಇದ್ದು, ಉಳಿಕೆ ಮನೆಗಳ ಸಮೀಕ್ಷೆ ನಡೆಸಿ ಪೂರ್ಣಗೊಳಿಬೇಕು’ ಎಂದು ಕಾರ್ಯಕ್ರಮದ ನೋಡೆಲ್ ಅಧಿಕಾರಿ ಹಾಗೂ ರೈಲ್ವೆ ಮಾರ್ಗ ವಿಶೇಷ ಭೂ ಸ್ವಾಧೀನ ಅಧಿಕಾರಿ ವೆಂಕಟೇಶ್ ನಾಯಕ್ ಹೇಳಿದರು.

‘ಬಿಟ್ಟು ಹೋಗಿರುವ ಮನೆಗಳನ್ನು ಗುರುತಿಸಿ ಸಮೀಕ್ಷೆ ಮಾಡಬೇಕು. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇಂತಹ 5,018 ಮನೆಗಳನ್ನು ಗುರುತಿಸಲಾಗಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಈ ಮನೆಗಳ ಸಮೀಕ್ಷೆ ಮಾಡಿ ವರದಿ ಸಲ್ಲಿಸಬೇಕು. ಏನಾದರೂ ಅನುಮಾನವಿದ್ದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದುವರಿಸಬೇಕು’ ಎಂದು ಸೂಚಿಸಿದರು.

‘ಕೆಲವೆಡೆ ಹೊರ ರಾಜ್ಯದ ಕಾರ್ಮಿಕರು ವಾಸವಿದ್ದಾರೆ. ಅವರಿಗೆ ಕನ್ನಡವೇ ಸರಿಯಾಗಿ ಬರುವುದಿಲ್ಲ. ಅವರನ್ನು ಸಮೀಕ್ಷೆಗೆ ಒಳಪಡಿಸಬೇಕೇ ಬೇಡವೇ’ ಎಂದು ಕೆಲ ಅಧಿಕಾರಿಗಳು ಪ್ರಶ್ನೆ ಮಾಡಿದರು.

ತಹಶೀಲ್ದಾರ್ ಟಿ. ಜಗದೀಶ್, ಉಪ ತಹಶೀಲ್ದಾರ್ ಮಹಾಂತೇಶ್, ಅಧಿಕಾರಿಗಳಾದ ರಂಗಪ್ಪ, ಬಿಇಒ ನಿರ್ಮಲಾದೇವಿ, ಸಿಡಿಪಿಒ ನವೀನ್ ಕುಮಾರ್, ಬಿಆರ್ಸಿ ಕೆ. ತಿಪ್ಪೇಸ್ವಾಮಿ, ಅರಣ್ಯಾಧಿಕಾರಿ ಶ್ರೀಹರ್ಷಾ ಇದ್ದರು.

ಬಿಟ್ಟು ಹೋಗಿರುವ ಮನೆಗಳನ್ನು ಗುರುತಿಸಿ ಸಮೀಕ್ಷೆ ಮಾಡಲು ಸೂಚನೆ

ಅನುಮಾನಗಳಿದ್ದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.