ನಾಯಕನಹಟ್ಟಿ: ಸಮೀಪದ ಎನ್.ಗೌರಿಪುರ ಗ್ರಾಮದ ಉಮಾ ಮಹೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಡಗರದಿಂದ ನಡೆಯಿತು.

ಗುರುವಾರ ಸಂಜೆ ದೇವಾಲಯದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ರಥೋತ್ಸವದ ನಿಮಿತ್ತ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ 2ಗಂಟೆಗೆ ಉಮಾಮಹೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ರಥದ ಬಳಿಗೆ ತರಲಾಯಿತು.

ರಥದ ಚಕ್ರಗಳಿಗೆ ಬಲಿ ಅನ್ನವನ್ನು ಅರ್ಪಿಸಿದ ನಂತರ ಮುಕ್ತಿಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ಗ್ರಾಮಸ್ಥ ಸಿ.ವಿಜಯ್ ಅವರು ₹3.11 ಲಕ್ಷಕ್ಕೆ ಬಾವುಟ ಪಡೆದರು. ಮಹಾಮಂಗಳಾರತಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿಲಾಯಿತು. ರಥವನ್ನು ದೇವರಹಳ್ಳಿ ರಸ್ತೆಯಲ್ಲಿರುವ ಪಾದಗಟ್ಟೆವರೆಗೆ ಭಕ್ತರು ಎಳೆದರು. ಬಾಳೆಹಣ್ಣು, ಚೂರು ಬೆಲ್ಲ ಮೆಣಸನ್ನು ರಥಕ್ಕೆ ತೂರಿ ಹರಕೆ ಸಲ್ಲಿಸಲಾಯಿತು. ನಂದಿಧ್ವಜ ಕುಣಿತ, ಕರಡಿ ಮಜಲು, ಜಾನಪದ ವಾದ್ಯಗಳು, ವೀರಗಾಸೆ ಮೆರುಗು ನೀಡಿದವು.

ಗರ್ಭಗುಡಿಯಲ್ಲಿ ಶಿವನ ತೊಡೆಯ ಮೇಲೆ ಪಾರ್ವತಿ ವಿರಾಜಮಾನವಾಗಿರುವ, ಚೋಳರ ಕಾಲದ್ದೆನ್ನಲಾದ ಅಪರೂಪವಾದ ವಿಗ್ರಹವನ್ನು ಹೂವಿನ ಹಾರ, ಆಭರಣಗಳಿಂದ ಅಲಂಕರಿಸಲಾಗಿತ್ತು.

ಗ್ರಾ.ಪಂ.ಸದಸ್ಯರಾದ ಡಿ.ತಿಪ್ಪೇಸ್ವಾಮಿ, ಆರ್.ಮಂಜುನಾಥ, ಗ್ರಾಮಸ್ಥರಾದ ಭೋಗೇಶ್, ಏಕಾಂತಮೂರ್ತಿ, ಶಿವಾನಂದಸ್ವಾಮಿ, ಪಿ.ಯು.ಸುನೀಲ್ ಕುಮಾರ್, ತಿಪ್ಪೇಸ್ವಾಮಿ, ಕೆ.ಟಿ.ಶಿವಯ್ಯ, ಪಿ.ಟಿ.ವಿನಯ್, ಗಣೇಶ್ ಪ್ರಸಾದ್, ಚಿದಾನಂದಮೂರ್ತಿ, ಕೆ.ಟಿ.ಸುರೇಶ್ ಸೇರಿದಂತೆ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.