ಹೊಸದುರ್ಗ: ‘ಸಾಣೇಹಳ್ಳಿಯಲ್ಲಿ ಶ್ರದ್ಧಾಂಜಲಿ ಸಮಾರಂಭ ಅರ್ಥಪೂರ್ಣವಾಗಿ ನಡೆಯಬೇಕು. ಹಿರಿಯ ಗುರುಗಳ ಆದರ್ಶಗಳು ನಮ್ಮೆಲ್ಲರಿಗೂ ಪರಿಚಯವಾಗುವಂತಾಗಬೇಕು. ಸಿರಿಗೆರೆ ಮಠ ಮತ್ತೆ ವಿಜೃಂಭಿಸಬೇಕು’ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಎಸ್.ಎಸ್. ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ‘ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ’ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಕಳೆದ ನಾಲ್ಕೈದು ವರ್ಷಗಳಿಂದ ಸಾಣೇಹಳ್ಳಿಯಲ್ಲಿ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಮಾಡಬೇಕು ಎನ್ನುವ ಆಶಯ ನಮ್ಮೆಲ್ಲರದ್ದಾಗಿತ್ತು. ಆಗು ಹೋಗುಗಳ ಬಗ್ಗೆ ಚರ್ಚಿಸುವವರೆಲ್ಲರೂ ಅಸ್ಪೃಶ್ಯರು ಎನ್ನುವ ಭಾವನೆ ಇದೆ. ಎಲ್ಲದಕ್ಕೂ ತಲೆ ಹಾಕುವವರನ್ನು ಸ್ಪರ್ಶ ಎನ್ನುವ ಭಾವನೆ ನಮ್ಮ ಸಮಾಜದಲ್ಲಿ ಕಾಣುತ್ತಿದ್ದೇವೆ. ಈ ಬಾರಿ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಅರ್ಥಪೂರ್ಣವಾಗಿ ನಡೆಸೋಣ’ ಎಂದರು.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಕಳೆದ ಐದಾರು ವರ್ಷಗಳಿಂದ ನಮ್ಮ ಸಮಾಜದ ಘನತೆ, ಗೌರವ ಎಷ್ಟು ಎತ್ತರಕ್ಕೆ ಬೆಳೆಯಬೇಕಾಗಿತ್ತೋ ಅದು ಬೆಳೆಯಲು ತೊಡಕು ಉಂಟಾಗಿದೆ ಎನ್ನುವ ಭಾವನೆ ನಮಗೂ, ನಿಮಗೂ ಇದೆ. ನಾವು ತಾಳ್ಮೆಯನ್ನು ಎಂದೂ ಕಳೆದುಕೊಂಡವರಲ್ಲ. ನಮ್ಮ ಹಿರಿಯ ಗುರುಗಳು ಯಾರೋ ವಿರುದ್ಧವಾಗಿ ಸೆಡ್ಡು ಹೊಡೆಯೋದನ್ನು ಕಲಿಸಲಿಲ್ಲ. ತಾಳ್ಮೆಯಿಂದ ಸಮಾಜವನ್ನು ಬೆಳೆಸಬೇಕೆಂದು, ಮುನ್ನಡೆಸಬೇಕೆಂದು ಕಲಿಸಿಕೊಟ್ಟವರು. ನಾವು ಅತ್ಯಂತ ಮೌನವಾಗಿ, ನೋವನ್ನು ನುಂಗಿಕೊಂಡು ಸಾಹಿತ್ಯ, ಸಂಸ್ಕೃತಿ, ಧರ್ಮ, ಶಿಕ್ಷಣ ಹೀಗೆ ನಮ್ಮಿಂದ ಏನೇನು ಒಳ್ಳೆಯ ಕೆಲಸಗಳನ್ನು ಮಾಡಬೇಕು ಅದನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇವೆ’ ಎಂದು ಹೇಳಿದರು.

‘ಹಿರಿಯ ಗುರುಗಳ ಪುಣ್ಯಸ್ಮರಣೆಯನ್ನು ಹಲವಾರು ವರ್ಷಗಳಿಂದ ಸಾಂಕೇತಿಕವಾಗಿ ಸಾಣೇಹಳ್ಳಿಯಲ್ಲಿ ಮಾಡಿಕೊಂಡು ಬಂದಿದ್ದೇವೆ. ಆದರೆ ಭಕ್ತರ ಹಾಗೂ ಸಮಾಜದ ಮುಖಂಡರು ಸಾಣೇಹಳ್ಳಿಯಲ್ಲಿ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ ಮಾಡಬೇಕೆಂಬುದು ಭಕ್ತರ ಆಶಯವಾಗಿದೆ.ಶ್ರದ್ಧಾಂಜಲಿ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನಡೆಯಬೇಕು. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ `ಬದುಕು ಬರಹ’ ಕುರಿತು ಯಾರಾದರೂ ತಮ್ಮ ಅನುಭವಗಳನ್ನು ಹಾಗೂ ಚಿಂತನೆಗಳನ್ನು ಬರೆದು ಕಳುಹಿಸಿದರೆ ಅದನ್ನು ಕೃತಿಯ ರೂಪದಲ್ಲಿ ಹೊರತರಲಾಗುವುದು’ ಎಂದು ಸ್ವಾಮೀಜಿ ಹೇಳಿದರು.

ಮುಖಂಡ ಅಣಬೇರು ರಾಜಣ್ಣ ಮಾತನಾಡಿ, ‘ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಗುರುವಿನ ಸ್ಮರಣೆಯನ್ನು ಮಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅವರು ಕೊನೆಯ ಉಸಿರಿರುವವರೆಗೂ ಸಮಾಜದ ಬಗ್ಗೆ ಹಿತ ಚಿಂತನೆ ಮಾಡುತ್ತಿದ್ದರು. ನೆಲಕಚ್ಚಿದ ಸಮಾಜವನ್ನು ಬಡಿದೆಬ್ಬಿಸಿದರು’ ಎಂದರು.

ಈ ವೇಳೆ ಅಂತರರಾಷ್ಟ್ರೀಯ ವಿಮಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ರುದ್ರೇಗೌಡ್ರು, ನಿವೃತ್ತ ಕುಲಪತಿ ಸಿದ್ದಪ್ಪ, ನಂಜಪ್ಪ ಆಸ್ಪತ್ರೆಯ ಮುಖ್ಯಸ್ಥ ಬೆನಕಪ್ಪ, ಚಿಂತಕ ಚಟ್ನಳ್ಳಿ ಮಹೇಶ್, ರಾಣೇಬೆನ್ನೂರಿನ ವರ್ತಕ ಅರಕೆರೆ ಮಲ್ಲೇಶಣ್ಣ , ಕಾಟೇಹಳ್ಳಿ ಶಿವಕುಮಾರ, ಶಿವಮೊಗ್ಗದ ಅಡಿಕೆ ವರ್ತಕ ಎಚ್.ಓಂಕಾರಪ್ಪ, ಮುಖಂಡರಾದ ಬಿದಿರಗಡ್ಡೆ ಮಂಜಪ್ಪ, ಹಿರೇಕೆರೂರಿನ ವಕೀಲ ತಿಪ್ಪಣ್ಣ, ಶಿವಮೊಗ್ಗದ ಬಾಳೆಕಾಯಿ ಮೋಹನ್, ಸಾ.ನಿ. ರವಿಕುಮಾರ್ ಸೇರಿದಂತೆ ಹಲವು ಭಕ್ತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.