ಚಿತ್ರದುರ್ಗ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಅರ್ಪಿಸಿದ ‘ಶ್ರೀಕೃಷ್ಣರಾಜ ನಗರ ಕೇಂದ್ರ ಗ್ರಂಥಾಲಯ’ ಶತಮಾನ ಪೂರೈಸಿದೆ. 1925ರಿಂದಲೂ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಓದುವ ಪ್ರೇರಣೆ ನೀಡುತ್ತಿರುವ ಬ್ರಿಟಿಷ್ ಕಾಲದ ಈ ಕಟ್ಟಡ ಸಾರ್ವಜನಿಕರ ನೆಚ್ಚಿನ ತಾಣವಾಗಿದೆ.

ಅಂಬೇಡ್ಕರ್ ವೃತ್ತದಿಂದ ಕೂಗಳತೆ ದೂರದಲ್ಲಿರುವ ಗ್ರಂಥಾಲಯ ಕಟ್ಟಡ ಪ್ರಕೃತಿಯ ಮಡಿಲಲ್ಲಿದೆ. ಇದು ಕೇವಲ ವಾಚನಾಲಯ, ಗ್ರಂಥಾಲಯವಷ್ಟೇ ಅಲ್ಲ. ಹಸಿರು ಪರಿಸರದ ವಿಹಾರ ತಾಣವೂ ಆಗಿದೆ. ಯುವಜನರು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಇಲ್ಲಿಯ ಹಸಿರು ವಾತಾರಣದಲ್ಲಿ ವಿಹರಿಸುವ ಜೊತೆಗೆ ಗ್ರಂಥಾಲಯದಲ್ಲಿನ ಪುಸ್ತಕ, ಪತ್ರಿಕೆ, ನಿಯತಕಾಲಿಕೆಗಳ ಓದಿನ ಆನಂದ ಅನುಭವಿಸುವುದು ದಶಕಗಳಿಂದ ನಡೆದಿದೆ.

ಗ್ರಂಥಾಲಯದ ಜೊತೆಯಲ್ಲೇ ಉದ್ಯಾನವೂ ಇರುವ ಕಾರಣ ಇಲ್ಲೊಂದು ಸುಂದರ ವಾತಾವರಣ ನಿರ್ಮಾಣವಾಗಿದೆ. ಸುತ್ತಲೂ ಬೆಳೆದು ನಿಂತಿರುವ ಗಿಡ–ಮರಗಳು ಜೊತೆಗೆ ಪುಸ್ತಕ, ಪತ್ರಿಕೆಗಳು ಓದಿನ ಗೀಳು ಹತ್ತಿಸುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯ ಸ್ಫೂರ್ತಿ ತುಂಬುತ್ತಿದೆ. ಇಲ್ಲಿ ಓದಿ ವಿವಿಧ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಇಲ್ಲಿಯ ನೆನಪುಗಳ ಬಗ್ಗೆ ಆಪ್ತ ಮಾತುಗಳನ್ನಾಡುತ್ತಾರೆ.

‘ನಾನು ಪದವಿ ಓದುವಾಗ ಪುಸ್ತಕ ಖರೀದಿಸುವ ಶಕ್ತಿ ಇರಲಿಲ್ಲ. ಗ್ರಂಥಾಲಯಕ್ಕೆ ತೆರಳಿ, ಅಲ್ಲಿಯೇ ಕುಳಿತು ನೋಟ್ಸ್ ಸಿದ್ಧಪಡಿಸಿಕೊಳ್ಳುತ್ತಿದ್ದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಆ ಗ್ರಂಥಾಲಯ ಕಾಮಧೇನು. ಸಾಹಿತ್ಯ ಓದುವವರ ಮನಸ್ಸುಗಳನ್ನು ಅಲ್ಲಿಯ ಪುಸ್ತಕಗಳು ಅರಳಿಸಿವೆ, ಯಶಸ್ವಿಗೊಳಿಸಿವೆ’ ಎಂದು ನಿವೃತ್ತ ಪ್ರಾಚಾರ್ಯ ಜೆ.ಯಾದವ ರೆಡ್ಡಿ ಹೇಳುವರು.

ಗ್ರಂಥಾಲಯದ ಆವರಣದಲ್ಲಿರುವ ಉದ್ಯಾನವನ್ನು ನಗರಸಭೆ ನಿರ್ವಹಿಸುತ್ತಿದೆ. ಜೊತೆಗೆ ಗ್ರಂಥಾಲಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇಡೀ ಆವರಣವನ್ನು ಸ್ವಚ್ಛವಾಗಿಟ್ಟುಕೊಂಡಿದ್ದು, ಹಸಿರು ಹಾಗೂ ಪುಸ್ತಕ ಪ್ರೀತಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. 1925ರಿಂದಲೂ ಹಲವು ತಲೆಮಾರುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿಯ ತಾಣವಾಗಿಯೂ ಗುರುತಿಸಿಕೊಂಡಿದೆ.

ಗ್ರಂಥಾಲಯವನ್ನು ನಾಲ್ಕು ವಿಭಾಗಗಳನ್ನಾಗಿ ರೂಪಿಸಲಾಗಿದೆ. ಪುಸ್ತಕ ವಿಭಾಗ ಮುಖ್ಯಕಟ್ಟಡದಲ್ಲಿದ್ದು ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಸೇರಿ ವಿವಿಧ ವಿಷಯಗಳುಳ್ಳ ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ. ಶುದ್ಧ ಪರಿಸರಲ್ಲಿ ಕುಳಿತು ಓದುವ ವಾತಾವರಣವನ್ನು ಕಲ್ಪಿಸಲಾಗಿದೆ. ಪತ್ರಿಕಾ ವಿಭಾಗಕ್ಕೆ ನಿತ್ಯ 200ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಎಲ್ಲ ಪತ್ರಿಕೆ, ನಿಯತಕಾಲಿಕೆಗಳು ಇಲ್ಲಿ ಇರುತ್ತವೆ. ಕಚೇರಿ ವಿಭಾಗದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ.

ಮುಖ್ಯವಾಗಿ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಗ್ರಂಥಾಲಯದ ಪ್ರಮುಖ ಅಂಗವಾಗಿದೆ. ವಿವಿಧ ಪರೀಕ್ಷೆ ತೆಗೆದುಕೊಂಡ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಇಲ್ಲಿ ಅಧ್ಯಯನ ಮಾಡುತ್ತಾರೆ. ಪಠ್ಯಪುಸ್ತಕ, ಸ್ಪರ್ಧಾತ್ಮಕ ನಿಯತಕಾಲಿಕೆಗಳು, ಜರ್ನಲ್ಗಳನ್ನು ಸ್ಪರ್ಧಾರ್ಥಿಗಳಿಗೆ ಒದಗಿಸಲಾಗಿದೆ. ಅವರಿಗಾಗಿಯೇ ಪ್ರತ್ಯೇಕ ಕೊಠಡಿ, ಉತ್ತಮ ಪೀಠೋಪಕರಣಗಳನ್ನು ನೀಡಲಾಗಿದೆ.

‘ಸಮುದಾಯ ಮಕ್ಕಳ ಕೇಂದ್ರ’ ವಿಭಾಗ ಗ್ರಂಥಾಲಯದಲ್ಲಿರುವ ಇನ್ನೊಂದು ವಿಶೇಷ ಅಂಗ. ಇಲ್ಲಿಗೆ ಮಕ್ಕಳು ಭೇಟಿ ನೀಡಿ ಪುಸ್ತಕ ಓದುತ್ತಾರೆ. ಇಲ್ಲಿರುವ ಆಟಿಕೆಗಳನ್ನು ಬಳಸಿ ಆಟವಾಡಿ ಖುಷಿಪಡುತ್ತಾರೆ. ಕೆಲ ಪಾಲಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತಂದು ಓದುವ ಅಭ್ಯಾಸ ಮೂಡಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

‘ನಾನು ಇದೇ ಗ್ರಂಥಾಲಯದಲ್ಲಿ ಓದಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಯಶಸ್ವಿಯಾದೆ. ಈಗಿನ ಕಾಲದ ಮಕ್ಕಳಿಗೆ ಹತ್ತಿರುವ ಮೊಬೈಲ್ ಹುಚ್ಚನ್ನು ಬಿಡಿಸುವುದು ಬಹಳ ಕಷ್ಟ. ಹೀಗಾಗಿ ನನ್ನ ಮಗನನ್ನು ಇಲ್ಲಿಗೆ ಕರೆದುತಂದು ಪುಸ್ತಕ ಕೊಡುತ್ತೇನೆ. ಆಟವಾಡಿಸುತ್ತೇನೆ. ಇಲ್ಲಿಯೇ ಹೋಂ ವರ್ಕ್ ಮಾಡಿಸುತ್ತೇನೆ. ಕೆಲ ಹೊತ್ತು ಮೊಬೈಲ್ ಮರೆಯಲು ಈ ಗ್ರಂಥಾಲಯ ಸಹಾಯಕವಾಗಿದೆ’ ಎಂದು ಕೆನರಾ ಬ್ಯಾಂಕ್ ಉದ್ಯೋಗಿ ಎಸ್. ಪಾಲಯ್ಯ ಹೇಳಿದರು.

ಶತಮಾನೋತ್ಸವ ಆಚರಣೆಗೆ ಸಿದ್ಧತೆ

‘ನಮ್ಮ ಗ್ರಂಥಾಲಯಕ್ಕೆ 100 ವರ್ಷಗಳಾಗಿರುವ ಕಾರಣ ಶತಮಾನೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಟ್ಟಡಕ್ಕೆ ಬಣ್ಣ ಮಾಡಿಸಲು ಈಗಾಗಲೇ ಗ್ರಂಥಾಲಯ ಇಲಾಖೆಯ ಆಯುಕ್ತರಿಂದ ಅನುಮತಿ ಪಡೆಯಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಹಕಾರ ಕೋರಲಾಗುವುದು’ ನಗರ ಕೇಂದ್ರ ಗ್ರಂಥಾಲಯದ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಬಸವರಾಜ ಕೊಳ್ಳಿ ಹೇಳಿದರು. ‘2011ರವರೆಗೂ ಈ ಗ್ರಂಥಾಲಯ ಜಿಲ್ಲಾ ಕೇಂದ್ರ ಗ್ರಂಥಾಲಯವಾಗಿತ್ತು. ಸದ್ಯ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರತ್ಯೇಕಗೊಂಡಿದ್ದು ನಗರ ಕೇಂದ್ರ ಗ್ರಂಥಾಲಯವಾಗಿ ಉಳಿದಿದೆ. ಓದುಗರಿಗೆ ಕುಡಿಯುವ ನೀರು ಸೇರಿ ಮೂಲ ಸೌಲಭ್ಯ ಒದಗಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.