ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾನುವಾರು ಅಕ್ರಮ ಸಾಗಾಟ: ಪೊಲೀಸರ ವಶಕ್ಕೆ

Published 7 ಜೂನ್ 2024, 4:49 IST
Last Updated 7 ಜೂನ್ 2024, 4:49 IST
ಅಕ್ಷರ ಗಾತ್ರ

ಬಜಪೆ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9 ದನ ಹಾಗೂ ವಾಹನ ಸೇರಿ ಸುಮಾರು ₹ 8 ಲಕ್ಷ ಮೌಲ್ಯದ ಸ್ವತ್ತುಗಳನ್ನು ಬಜಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಜಪೆಯ ಶಾಂತಿಗುಡ್ಡೆ ಚೆಕ್ ಪೋಸ್ಟ್ ಬಳಿ ಬಜಪೆ ಕಡೆಯಿಂದ ಇಬ್ಬರು ವ್ಯಕ್ತಿಗಳು ದನಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿಸಿ ಜೋಕಟ್ಟೆ ಕಡೆಗೆ ಶಾಂತಿಗುಡ್ಡೆ ಮಾರ್ಗವಾಗಿ ಸಾಗಾಟ ಮಾಡುತ್ತಿದ್ದರು. ಗೂಡ್ಸ್ ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದು, ವಾಹನವನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

7 ದನಗಳು, 2 ಕೋಣಗಳು ಹಾಗೂ ಮಿನಿ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಜಪೆ ಇನ್‌ಸ್ಪೆಕ್ಟರ್‌ ನಂದೀಶ್ವರ ಬಿ.ಕುಂಬಾರ್ ನೇತೃತ್ವದಲ್ಲಿ ಪಿಎಸ್‌ಐ ರೇವಣಸಿದ್ದಪ್ಪ, ಬಜಪೆ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ, ಎಎಸ್‌ಐ ರಾಮ ಪೂಜಾರಿ, ಸುಜನ್, ರಶೀದ ಶೇಖ್, ಚಿನ್ನಪ್ಪ, ಮಂಜುನಾಥ, ದೇವಪ್ಪ, ಬಸವರಾಜ್ ಪಾಟೀಲ್, ಅನಿಲ್ ಕುಮಾರ್, ಮಧು, ಮಧು ಮೂಡಿಗೆರೆ, ಪ್ರಕಾಶ್, ವಿರೂಪಾಕ್ಷ, ರಮೇಶ್, ಚೇತನ್ ಮಾಳಿ, ವಿರೇಶ್, ಭರಮಪ್ಪ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ವಶಪಡಿಸಿಕೊಂಡ ಜಾನುವಾರುಗಳು
ವಶಪಡಿಸಿಕೊಂಡ ಜಾನುವಾರುಗಳು
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9 ದನ ಹಾಗೂ ವಾಹನ ಸೇರಿ ಸುಮಾರು ₹ 8 ಲಕ್ಷ ಮೌಲ್ಯದ ಸ್ವತ್ತುಗಳನ್ನು ಬಜಪೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT