ಶುಕ್ರವಾರ, ಆಗಸ್ಟ್ 19, 2022
27 °C
1.12 ಲಕ್ಷ ಮಾದರಿ ಪರೀಕ್ಷೆ ; ಆರು ಮಂದಿ ಮೃತ

ದ.ಕ: 310 ಜನರಿಗೆ ಕೋವಿಡ್ ದೃಢ, 256 ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 310 ಮಂದಿಗೆ ಕೋವಿಡ್‌–19 ದೃಢವಾಗಿದ್ದು, 256 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ಬುಧವಾರ ದೃಢವಾಗಿದೆ.

ಸೋಂಕಿತರ ಪೈಕಿ ಮಂಗಳೂರು ತಾಲ್ಲೂಕಿನ 188, ಬಂಟ್ವಾಳದ 27, ಪುತ್ತೂರು, ಸುಳ್ಯ ತಾಲ್ಲೂಕಿನ ತಲಾ 25, ಬೆಳ್ತಂಗಡಿ ತಾಲ್ಲೂಕಿನ 26 ಹಾಗೂ ಬೇರೆ ಜಿಲ್ಲೆಯ 19 ಮಂದಿ ಸೇರಿದ್ದಾರೆ. 82 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢವಾಗಿದ್ದರೆ, 176 ಮಂದಿಯಲ್ಲಿ ಐಎಲ್‌ಐ, 6 ಜನರಲ್ಲಿ ಎಸ್‌ಎಆರ್‌ಐ ಲಕ್ಷಣಗಳಿಂದ ಕೋವಿಡ್‌–19 ಪತ್ತೆಯಾಗಿದೆ. 46 ಸೋಂಕಿತರ ಸಂಪರ್ಕದ ಮೂಲವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

131 ಪುರುಷರು, 70 ಮಹಿಳೆಯರು ಸೇರಿ 201 ಮಂದಿಗೆ ರೋಗಲಕ್ಷಣಗಳಿದ್ದರೆ, 65 ಪುರುಷರು ಹಾಗೂ 44 ಮಹಿಳೆಯರು ಸೇರಿದಂತೆ 109 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ.

256 ಜನ ಗುಣಮುಖ: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ಹಾಗೂ ಹೋಂ ಐಸೋಲೇಷನ್‌ನಲ್ಲಿದ್ದ 172 ಜನರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ.

6 ಸಾವು: ಮಂಗಳೂರು ತಾಲ್ಲೂಕಿನ ಐವರು, ಬೇರೆ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ದೃಢವಾಗಿದೆ. ಅನಾರೋಗ್ಯದ ಸಮಸ್ಯೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಕಾಸರಗೋಡು: 270 ಪ್ರಕರಣ

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 270 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. 242 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 144 ಮಂದಿ ಗುಣಮುಖರಾಗಿದ್ದಾರೆ.

ಇದುವರೆಗೆ 6,678 ಮಂದಿಗೆ ಸೋಂಕು ದೃಢಪಟ್ಟಿದೆ. 4,642 ಮಂದಿ ಗುಣಮುಖರಾಗಿದ್ದಾರೆ. 46 ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು