ಮುಡಿಪು: ಕೊಣಾಜೆಯ ಸಪ್ತಸ್ವರ ಕಲಾತಂಡ ಸಾರ್ವಜನಿಕ ಶಾರದೋತ್ಸವ ಸಮಿತಿಯ ಸಹಯೋಗದಲ್ಲಿ ಕೊಣಾಜೆ ಶಾರದೋತ್ಸವ ಆಚರಿಸುತ್ತಿದ್ದು ಈಗ 20ನೇ ವರ್ಷದ ಸಂಭ್ರಮದಲ್ಲಿದೆ. ಈ ಬಾರಿಯ ಕಾರ್ಯಕ್ರಮಗಳು ಇದೇ 9 ಮತ್ತು 10ರಂದು ನಡೆಯಲಿವೆ. 9ರಂದು ಬೆಳಿಗ್ಗೆ ಗಣಗೋಮ ನಡೆಯಲಿದ್ದು ಎನ್ ಶ್ರೀನಿವಾಸ ಶೆಟ್ಟಿ ಪುಲ್ಲು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ ಜಗದೀಶ್ ಐತಾಳ್ ಸುರತ್ಕಲ್ ಪೌರೋಹಿತ್ಯದಲ್ಲಿ ಶ್ರೀ ಶಾರದಾ ಪ್ರತಿಷ್ಠೆ ನಡೆಯಲಿದೆ. ಸಾಂಸ್ಕೃತಿಕ ವೈವಿಧ್ಯ ವಿಠಲ್ ನಾಯಕ್ ಅವರಿಂದ ಗೀತಾ ಸಾಹಿತ್ಯ ಸಂಭ್ರಮವೂ ಇರಲಿದೆ. ಸಂಜೆ 7.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಯಮಿ ವಿವೇಕ್ ಶೆಟ್ಟಿ ಬೋಳ್ಯಾಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಮಾಧವಿ ವಿಜಯ್ ಕುಮಾರ್ ಉದ್ಘಾಟಿಸುವರು. ನಿವೃತ್ತ ಅಧ್ಯಾಪಕ ಶಂಕರ ಮಾಸ್ಟರ್ ಕುಂಟಲಗುಳಿ ಅವರಿಗೆ ಗ್ರಾಮ ಗೌರವ ಪುರಸ್ಕಾರ ನೀಡಲಾಗುವುದು. ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಕೊಣಾಜೆ ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.10ರಂದು ಬೆಳಿಗ್ಗೆ ಶಾರದಾ ಪೂಜೆ ಭಜನಾ ಸಂಕೀರ್ತನೆ ಉದ್ಘಾಟನೆ ಅಕ್ಷರಾಭ್ಯಾಸ ನಡೆಯಲಿದ್ದು 2 ಗಂಟೆಯಿಂದ ರೇಷ್ಮಾ ನಿರ್ಮಲ ಭಟ್ ಶಿಷ್ಯ ವೃಂದದಿಂದ ನೃತ್ಯ ವೈಭವ ತೇಜಸ್ಬಿನಿ ಅವರಿಂದ ಏಕಪಾತ್ರಾಭಿನಯ ಸಂಜೆ 4ರಿಂದ ಸಿಂಗಾರಿ ಮೇಳ ಪಿಲಿನಲಿಕೆ ಹಾಗೂ ಚೆಂಡೆವಾದನ ನಡೆಯಲಿದೆ. ಮಹಾಪೂಜೆಯ ಬಳಿಕ ಶಾರದಾ ಮಾತೆಯ ಶೋಭಾಯಾತ್ರೆಯು ನಡೆಯಲಿದೆ.