ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಯಿಲ-ಗೋಕುಲನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ

Published 3 ಸೆಪ್ಟೆಂಬರ್ 2024, 14:00 IST
Last Updated 3 ಸೆಪ್ಟೆಂಬರ್ 2024, 14:00 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಯುವ ಪೀಳಿಗೆ ಧರ್ಮದ ಆಚರಣೆಯಲ್ಲಿ ಪಾಲ್ಗೊಂಡು ಧರ್ಮದ ಮೂಲವನ್ನು, ಸ್ವರೂಪವನ್ನು ಗಟ್ಟಿಗೊಳಿಸಬೇಕು ಎಂದು ನಿವೃತ್ತ ಶಿಕ್ಷಕ ಬಾಲಚಂದ್ರ ಮುಚ್ಚಿಂತ್ತಾಯ ಹೇಳಿದರು.

ಕೊಯಿಲ-ರಾಮಕುಂಜ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಗೋಕುಲನಗರದಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್‌ದಾಸ್‌ ಶೆಟ್ಟಿ ಬಡಿಲ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಸುಚೇತಾ ಮಾತನಾಡಿದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಆರುವಾರ ಭಾಗವಹಿಸಿದ್ದರು.

ನಿವೃತ್ತ ಹಿರಿಯ ಪಶು ಪರೀವೀಕ್ಷಕ ಆಶೋಕ್ ಕೊಯಿಲ, ಮೆಸ್ಕಾಂ ಪವರ್ ಮ್ಯಾನ್ ವಿಶ್ವನಾಥ ರಾಮಕುಂಜ, ನಿವೃತ್ತ ಸಹಾಯಕ ಎಎಸ್‌ಐ ಕುಶಾಲಪ್ಪ ಗೌಡ ಆನೆಗುಂಡಿ, ಕುಶಾಲಪ್ಪ ಗೌಡ ಪಲ್ಲಡ್ಕ, ನಿವೃತ್ತ ಸೈನಿಕ ಸುಬೇದಾರ್ ಗುಣಕರ ಕೆರ್ನಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಪದ್ಮಪ್ಪ ಗೌಡ ಸಂಪ್ಯಾಡಿ, ಕಡಬ ಭೂಮಾಪನ ಇಲಾಖಾ ನಿವೃತ್ತ ಸಿಬ್ಬಂದಿ ಮೋನಪ್ಪ ಶೆಟ್ಟಿ ಅವನ್ನು ಸನ್ಮಾನಿಸಲಾಯಿತು.

ಆತೂರು ಸದಾಶಿವ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಪೂಜಾ ವಿಧಿ ವಿಧಾನ ನೆರವೇರಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೃಷ್ಣಮೂರ್ತಿ ಕೆಮ್ಮಾರ ಸ್ವಾಗತಿಸಿ, ಪ್ರಕಾಶ್ ಕೆಮ್ಮಾರ ವಂದಿಸಿದರು. ವಿನೋದ್ ಪಲ್ಲಡ್ಕ, ಸುದೀಶ್ ಪಟ್ಟೆ, ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರ್ವಹಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT