ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರುಸ್‌ 16ರಿಂದ

Published 9 ಜನವರಿ 2024, 14:26 IST
Last Updated 9 ಜನವರಿ 2024, 14:26 IST
ಅಕ್ಷರ ಗಾತ್ರ

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರುಸ್ ಮುಬಾರಕ್ ಜ.16ರಿಂದ 20ರ ವರೆಗೆ ನಡೆಯಲಿದೆ ಎಂದು ಖತೀಬರಾದ ತಾಜುದ್ದೀನ್ ಸಖಾಫಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಖುನಾ ಖುರ್ರತ್ ಸ್ವಾದಾತ್ ಆಸ್ಸಯ್ಯದ್ ಫಝಲ್ ಕೋಯಮ್ಮ ತಂಬಳ್ ಕೂರತ್ ರವರ ಅಧ್ಯಕ್ಷತೆಯಲ್ಲಿ ಉರುಸ್‌ ನಡೆಯಲಿದ್ದು, ಜ.16ರಂದು ಸಂಜೆ 5 ಗಂಟೆಗೆ ಪರಪ್ಪು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಧ್ವಜಾರೋಹಣ ನೆರವೇರಿಸಿದರಿ. ರಾತ್ರಿ 8ಗಂಟೆಗೆ ಪರಪ್ಪು ಮಸೀದಿ ಖತೀಬ ತಾಜುದ್ದೀನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸುವರು.

ಅಸ್ಸಯ್ಯದ್ ಅಬೂಬಕ್ಕರ್ ಸಿದ್ದೀಕ್ ತಂಜಳ್ ಆಶೀರ್ವಚನ, ಹುಸೈನ್ ಅಪ್ಪನಿ ಆಲ್ ಮುಈನಿ ಮಾರ್ನಾಡ್ ತಾಜುಲ್ ಉಲಮಾ ಅನುಸ್ಮರಣಾ ರಭಾಷಣ ಮಾಡಲಿದ್ದು, ಉರುಸ್ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್ ಅಧ್ಯಕ್ಷತೆ ವಹಿಸುವರು.

ಜ.17ರಂದು ಸಹಾಯಕ ಖಾಝಿಗಳಾದ ಅಸ್ಪಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಜಳ್ ಆಶೀರ್ವಚನ, ರಶೀದ್ ಸಆದಿ ಬೋಳಿಯಾರ್ ಮುಖ್ಯ ಭಾಷಣ ಮಾಡುವರು. ಜ.18ರಂದು ಅಸ್ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಜಳ್ ಮದನಿ ಆಶೀರ್ವಚನ, ಕೋಯ ಕಾಪ್ಪಾಡ್ ಮತ್ತು ಸಂಗಡಿಗರಿಂದ ಗ್ರ್ಯಾಂಡ್ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಜ.19ರಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಮಜಿಲಿಸ್ ನಡೆಯಲಿದೆ. ಜ.20ರಂದು ಉರುಸ್‌ ಸಮಾರೋಪವು ಅಸ್ಸಯ್ಯದ್ ಕೂರತ್ ತಂಜಳ್ ಅಧ್ಯಕ್ಷತೆಯಲ್ಲಿ ಸಂಜೆ ಮಗ್‌ರಿಬ್ ನಮಾಝಿನ ನಂತರ ಆಧ್ಯಾತ್ಮಿಕ ಮಜ್ಲಿಸ್‌ ಹಾಗೂ ಸಾಮೂಹಿಕ ಝಿಯಾರತ್ ನಡೆಯಲಿದೆ. ರಾತ್ರಿ 8ಕ್ಕೆ ನೂರುಸ್ಸಾದಾತ್ ಅಸ್ಸಯ್ಯದ್ ಅಬ್ದುರಹ್ಮಾನ್ ಕೋಯ ತಂಜಳ್ ಬಾಯಾರ್ ದುವಾ ನೆರವೇರಿಸುವರು. ಜಾರಿಗೆಬೈಲು ಮಸೀದಿಯ ಮುದರಿಸ್‌ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಖಾನಿ ತಾಜುದ್ದೀನ್ ಸಖಾಫಿ ಮುಸ್ತಫಾ ಸಖಾಫಿ ತೆನ್ನಲ, ವಿಧಾನ ಸಭೆಯ ಸ್ಪೀಕರ್‌ ಯು.ಟಿ.ಖಾದರ್, ಹಿದಾಯತ್ತುಲ್ಲ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಭಾಗವಹಿಸಲಿದ್ದಾರೆ. ಹಸನಬ್ಬ ಚಾರ್ಮಾಡಿ, ಅಬ್ದುಲ್ಲ ಮಾದುಮೂಲೆ ಅವರನ್ನು ಸನ್ಮಾನಿಸಲಾಗುವುದು ಎಂದರು.

ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಕೆ.ಎಂ.ಅಬ್ದುಲ್ ಕರೀಮ್ ಗೇರುಕಟ್ಟೆ, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಆಡಳಿತ ಸಮಿತಿ ಅಧ್ಯಕ್ಷ ಅಬೂಬಕ್ಕರ್, ಉಪಾಧ್ಯಕ್ಷ ಬಿ.ಕೆ.ರವೂಫ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT