ಜಿಲ್ಲೆಯ ಕಾರ್ಮಿಕರ ಪಾಲಿಗೆ ಕೆಂಪುಕಲ್ಲು ಮರಳು ಅನ್ನದ ಬಟ್ಟಲಿನಂತೆ. ಇವು ಇಲ್ಲದೇ ಇಲ್ಲಿ ನಿರ್ಮಾಣ ಕಾರ್ಯ ಸ್ತಬ್ಧವಾಗುತ್ತದೆ. ಸರ್ಕಾರದ ನೀತಿಯಿಂದ ಶೇ 75ರಷ್ಟಯ ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ.
ಉಮಾನಾಥ ಕೋಟ್ಯಾನ್, ಶಾಸಕ
ಮರಳು ಕೆಂಪುಕಲ್ಲು ಪೂರೈಕೆ ಸ್ಥಗಿತವಾಗುವಂತೆ ಮಾಡಿರುವುದು ಜಿಲ್ಲೆಯ ಜನರ ವಿರುದ್ದದ ಕಾಂಗ್ರೆಸ್ ನಡೆಸುತ್ತಿರುವ ಷಡ್ಯಂತ್ರದ ಭಾಗ. ಹಿಂದೂ ವಿರೋಧಿ ಧೋರಣೆಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನರ ಹೊಟ್ಟೆಗೆ ಹೊಡೆಯುತ್ತಿದೆ.
ಡಾ.ವೈ.ಭರತ್ ಶೆಟ್ಟಿ, ಶಾಸಕ
ಜಿಲ್ಲೆಯವರೇ ಆದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ವಿದೇಶ ಸುತ್ತುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈಚೆಗೆ ಜಿಲ್ಲೆಗೇ ಭೇಟಿ ನೀಡುತ್ತಿಲ್ಲ. ಜನರ ಕಷ್ಟಗಳನ್ನು ಕೇಳುವವರಿಲ್ಲದ ಸ್ಥಿತಿ ಇದೆ