ದಾವಣಗೆರೆ: ಗಣೇಶೋತ್ಸವ ಬಂದಾಗಲೆಲ್ಲ ಡಿಸ್ಕ್ ಜಾಕಿ (ಡಿ.ಜೆ) ಕುರಿತ ಚರ್ಚೆ ಮುನ್ನೆಲೆಗೆ ಬರುತ್ತದೆ. ಈ ಬಾರಿ ಜಿಲ್ಲಾಡಳಿತ ಡಿ.ಜೆ ನಿಷೇಧಿಸಿರುವುದರಿಂದ ಆ ಚರ್ಚೆ ತಾರಕಕ್ಕೇರಿದೆ.

ಇತ್ತೀಚಿನ ವರ್ಷಗಳಲ್ಲಿ ಗಣೇಶ ವಿಸರ್ಜನೆ ಸಂದರ್ಭ ಯುವಜನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಲು ಮತ್ತಷ್ಟು ಹುರುಪು ತುಂಬುವ ಸಾಧನವಾಗಿ ಡಿ.ಜೆ ರೂಪುಗೊಂಡಿದೆ.

ಹುರುಪು ತುಂಬುವುದು ಆ ಕ್ಷಣದ ಉನ್ಮಾದಕ್ಕೆ ಪ್ರೇರಣೆ ಆಗಬಹುದು. ಆದರೆ, ಆ ಡಿ.ಜೆ ಶಬ್ದದಿಂದಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಲೆಕ್ಕವಿಲ್ಲ ಎಂಬುದೂ ಅಷ್ಟೇ ಸತ್ಯ. ಅಂತೆಯೇ ಕೆಲವರು ಡಿ.ಜೆ. ಬಳಕೆಯನ್ನು ಪುರಸ್ಕರಿಸಿದರೆ, ಅನೇಕರು ವಿರೋಧಿಸಿದ್ದಾರೆ.

‘ಡಿ.ಜೆ ನಿಷೇಧದಿಂದ ಹಿಂದೂಗಳ ಭಾವನೆಗಳನ್ನು ಕೆಣಕಲಾಗಿದೆ ಎಂದೂ, ಸಂಪ್ರದಾಯಕ್ಕೆ ಅಡಚಣೆ ಉಂಟು ಮಾಡಲಾಗಿದೆ’ ಎಂದೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ತೀರಾ ಇತ್ತೀಚಿನ ವರ್ಷಗಳಲ್ಲಿ ಬಳಕೆ ಆಗುತ್ತಿರುವ ಡಿ.ಜೆ, ಹಿಂದೂಗಳ ಸಂಪ್ರದಾಯದ ಭಾಗ ಆಗಿದ್ದು ಯಾವಾಗ? ಎಂಬುದನ್ನೂ ಅವರು ಹೇಳಿಲ್ಲ.

‘ಯುವಜನರು ನಿಷೇಧಾಜ್ಞೆಯನ್ನು ಉಲ್ಲಂಘಿಸುವಂತೆಯೂ ಅವರು ಕರೆ ಕೊಟ್ಟಿರುವುದು ಅನೇಕ ಯುವಕರನ್ನು ಉದ್ದೀಪನಗೊಳಿಸುವ ಸಾಧ್ಯತೆಗಳೂ, ಅಪಾಯಗಳೂ ಇರುವುದಂತೂ ದಿಟ’ ಎಂಬುದು ಡಿ.ಜೆ.ಯಿಂದ ಕಿರಿಕಿರಿ ಅನುಭವಿಸಿದವರ ಅನಿಸಿಕೆಯಾಗಿದೆ.

ಕಳೆದ ವರ್ಷ ನಗರದ ಬೇತೂರು ರಸ್ತೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟದಂತಹ ದುರ್ಘಟನೆ ನಡೆದು, ತ್ವೇಷಮಯ ವಾತಾವರಣ ನಿರ್ಮಾಣ ಆಗಿದ್ದೂ ಈ ಬಾರಿ ಡಿ.ಜೆ ನಿಷೇಧಕ್ಕೆ ಪ್ರಮುಖ ಕಾರಣ. ಡಿ.ಜೆ ಸಂಗೀತ, ನೃತ್ಯ ಈ ದುರ್ಘಟನೆಗೆ ನೇರ ಕಾರಣ ಆಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರಲಿಕ್ಕಿಲ್ಲ. ಆದರೂ ಉನ್ಮಾದಕ್ಕೆ ಪ್ರೇರಣೆ ಆಗುವುದಂತೂ ಸತ್ಯ.

‘70 ಡೆಸಿಬಲ್ಗಿಂತ ಅಧಿಕ ಪ್ರಮಾಣದ ಶಬ್ದ ಕಿವಿಯ ತಮಟೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಅದರ ಪ್ರಮಾಣ 120ಕ್ಕೂ ಅಧಿಕ ಡೆಸಿಬಲ್ ಆಗಿರುವ ಉದಾಹರಣೆಗಳಿವೆ. ಹಾಗಾಗಿ ಡಿ.ಜೆ ಅಪಾಯಕಾರಿ. ಅನೇಕರ ಶಾಶ್ವತ ಕಿವುಡುತನಕ್ಕೆ ಅದು ಕಾರಣವಾಗಿದೆ. ದುರ್ಬಲ ಹೃದಯ ಇರುವವರಿಗೆ ಹೃದಯಾಘಾತಕ್ಕೂ ಡಿ.ಜೆ ಶಬ್ದ ಕಾರಣವಾಗುವ ಅಪಾಯಗಳಿವೆ ಎಂಬುದು ಕಿವಿ ಮೂಗು ಗಂಟಲು (ಇಎನ್ಟಿ) ತಜ್ಞರ ಎಚ್ಚರಿಕೆಯಾಗಿದೆ.

‘ಕೆಲವರಲ್ಲಿ ಕಿವಿಯ ತಮಟೆ ದಿಢೀರ್ ಹರಿದು ಕಿವುಡುತನ ಕಾಣಿಸಿಕೊಳ್ಳದೇ ಇರಬಹುದು. ಆದರೆ, ಅಧಿಕ ಪ್ರಮಾಣದ ಶಬ್ದಕ್ಕೆ ತೆರೆದುಕೊಂಡರೆ ಅಲ್ಪಸ್ವಲ್ಪ ಪ್ರಮಾಣದ ಕಿವಿಡುತನ ಕಾಣಿಸಿಕೊಳ್ಳುತ್ತದೆ. ಯುವಜನರಿಗೆ ಅದು ತಕ್ಷಣಕ್ಕೆ ಅನುಭವಕ್ಕೆ ಬರುವುದಿಲ್ಲ. ಕಾಲ ಕ್ರಮೇಣ ನ್ಯೂನತೆ ಅನುಭವಕ್ಕೆ ಬರುತ್ತದೆ’ ಎಂದೂ ಅವರು ಹೇಳುತ್ತಾರೆ.

ಪ್ರಾಣಿ, ಪಕ್ಷಿಗಳಿಗಂತೂ ಡಿಜೆ ಹೊರಹೊಮ್ಮಿಸುವ ಅಧಿಕ ಶಬ್ದ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತದೆ. ವಿಪರೀತ ಶಬ್ಧಕ್ಕೆ ಸೂಕ್ಷ್ಮ, ಅತಿ ಸೂಕ್ಷ್ಮವಾದ ಪಕ್ಷಿಗಳು, ಬೀದಿ ನಾಯಿ, ಸಾಕು ನಾಯಿ, ಬೆಕ್ಕಿನಂಥ ಸೂಕ್ಷ್ಮ ಪ್ರಾಣಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತದೆ ಎಂದೂ ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

‘ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಲ್ಲಿ ಒಬ್ಬ ವ್ಯಕ್ತಿಯ ಕಿವಿಗಳು ಯಾವುದೇ ತೊಂದರೆಗಳಿಲ್ಲದೆ 70 ಡೆಸಿಬೆಲ್ವರೆಗೆ ಶಬ್ದವನ್ನು ಕಿವಿಗಳು ತಾಳಿಕೊಳ್ಳಬಹುದು. 85 ಡೆಸಿಬೆಲ್ ಮೀರಿದ ಶಬ್ದವು ಸತತವಾಗಿ 8 ಘಂಟೆಗಳನ್ನು ಮೀರಿದರೆ ಕಿವಿಗಳಿಗೆ ಸಮಸ್ಯೆ ಆಗುತ್ತದೆ. ಕಿವಿಯ ತಮಟೆ ಹರಿದು ಹೋಗುವ, ರಕ್ತಸ್ರಾವವಾಗಬಹುದು. ತಾತ್ಕಾಲಿಕ ಕಿವುಡುತನ, ಕಿವಿಗಳಲ್ಲಿ ಗುಂಯ್ ಗುಡುವಿಕೆ ಸೇರಿ ಇತರ ಸಮಸ್ಯೆಗಳು ಉಂಟಾಗಬಹುದು. ಡಿಜೆಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ 120 ಡೆಸಿಬೆಲ್ಗಿಂತ ಹೆಚ್ಚು ಶಬ್ದವನ್ನೇ ಇಡಬೇಕಾಗುತ್ತದೆ. ಶಬ್ದ ಮಾಲಿನ್ಯದ ಜೊತೆಗೆ ಕಿವಿಗಳ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.