ದಾವಣಗೆರೆ: ‘ಜಗತ್ತಿನಲ್ಲಿ ನಡೆಯುವ ಕೌತುಕಗಳನ್ನು ನೋಡುವ ಅದ್ಭುತ ಅವಕಾಶಗಳನ್ನು ಯಾರೂ ಕಳೆದುಕೊಳ್ಳಬಾರದು’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ (ಕರಾವಿಪ) ಗೌರವಾಧ್ಯಕ್ಷ ಜೆ.ಬಿ.ರಾಜ್ ಅಭಿಪ್ರಾಯಪಟ್ಟರು.

ನಗರದ ಎವಿಕೆ ಕಾಲೇಜಿನಲ್ಲಿ ಕರಾವಿಪ, ಜಿಲ್ಲಾ ಬಾಲಭವನ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆಕಾಶದ ಕೌತುಕ- 2024’ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾವಂತ ಜನರಲ್ಲಿಯೇ ಹೆಚ್ಚು ಮೌಢ್ಯ ಆಚರಣೆ ಕಾಣುತ್ತಿದ್ದೇವೆ. ಬೆಕ್ಕು ಅಡ್ಡ ಬಂದರೆ ಸ್ವಲ್ಪ ಸಮಯ ನಿಂತು ಹೋಗುತ್ತಾರೆ. ಕೆಲಹೊತ್ತು ನಿಂತು ಹೋಗುವುದರಿಂದ ತೊಂದರೆ ಏನೂ ಇಲ್ಲ ಎಂದು ಭಾವಿಸಿ ಪ್ರಜ್ಞಾವಂತರೆನಿಸಿಕೊಂಡವರೇ ಹೀಗೆ ಮಾಡುತ್ತಾರೆ. ಇದರಿಂದ ನಿಮ್ಮನ್ನು ಅನುಸರಿಸುವ ಹಲವರಿಗೆ ಮೌಢ್ಯವನ್ನು ಕಲಿಸಿದಂತಾಗುತ್ತದೆ. ನಾವು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ಇತರರಿಗೂ ಮಾದರಿಯಾಗಬೇಕು’ ಎಂದು ಹೇಳಿದರು.

‘ನಾವು ಪ್ರತಿದಿನ ಆಕಾಶ ನೋಡುತ್ತೇವೆ. ಆದರೆ, ಅದರ ಕೌತುಕಭರಿತ ಅಂಶಗಳ ಕುರಿತು ಯೋಚಿಸುವುದು ಕಡಿಮೆ. ಆಕಾಶ ಎಷ್ಟು ವಿಶಾಲವಾಗಿದೆಯೋ ಅಷ್ಟೇ ಕೌತುಕವಾಗಿದೆ. ಅದನ್ನು ನೋಡುವ ನಮ್ಮ ಒಳದೃಷ್ಟಿ ಕುತೂಹಲಭರಿತವಾಗಿರಬೇಕು. ಆಗ ನಾವು ಪ್ರತಿದಿನ ಹೊಸ ವಿದ್ಯಮಾನಗಳನ್ನು ಗುರುತಿಸಬಹುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಗುರುಪ್ರಸಾದ್ ತಿಳಿಸಿದರು.

‘ಗ್ರಹಣದ ಸಮಯದಲ್ಲಿ ಬಹುತೇಕರು ಮೌಢ್ಯ ಆಚರಿಸುತ್ತಾರೆ. ಆದರೆ, ಗ್ರಹಣಗಳು ಬಾಹ್ಯಾಕಾಶದಲ್ಲಿ ನಡೆಯುವ ಸಾಮಾನ್ಯ ಚಟುವಟಿಕೆ. ಕೆಲವು ಜ್ಯೋತಿಷಿಗಳು ಮೌಢ್ಯವನ್ನೇ ಬಂಡವಾಳವನ್ನಾಗಿಸಿಕೊಂಡು ಇಲ್ಲಸಲ್ಲದ ಆಚರಣೆಗಳಿಗೆ ಪ್ರೋತ್ಸಾಹಿಸುತ್ತಾರೆ’ ಎಂದು ಖಗೋಳ ತಜ್ಞ ಎಂ.ಟಿ. ಶರಣಪ್ಪ ಹೇಳಿದರು.

‘ಇದೊಂದು ಉತ್ತಮ ಕಾರ್ಯಕ್ರಮವಾಗಿತ್ತು. ಈ ತಿಂಗಳ ಎಲ್ಲ ಬಾಹ್ಯಾಕಾಶ ಕೌತುಕಗಳನ್ನು ವೀಕ್ಷಿಸಿ ವರದಿ ತಯಾರಿಸಿ’ ಎಂದು ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೇಶ್ ಕತ್ತಲಗೆರೆ, ಬಾಲಭವನದ ಸಂಯೋಜಕಿ ಶಿಲ್ಪಾ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಪಾಲ್ಗೊಂಡಿದ್ದರು.

‘ತಿಂಗಳಲ್ಲೇ 3 ಬಾಹ್ಯಾಕಾಶ ವಿಸ್ಮಯಗಳು’ ‘

ಅಕ್ಟೋಬರ್ 12 ರಂದು ಧೂಮಕೇತು ಸಿ/2023 ಎ3 (ಸುಚೇಶನ್-ಅಟ್ಲಾಸ್) ಭೂಮಿಗೆ ಅತೀ ಹತ್ತಿರಕ್ಕೆ ಬರಲಿದೆ. ಅಂದು ಸಂಜೆ 6 ಗಂಟೆ 46 ನಿಮಿಷದಿಂದ ಬರಿಗಣ್ಣಿನಿಂದ ನೋಡಬಹುದು. ಇದು ಮರುಕಳಿಸಲು ಮತ್ತೆ 80000 ವರ್ಷ ಬೇಕಾಗುತ್ತದೆ’ ಎಂದು ಖಗೋಳ ತಜ್ಞ ಎಂ.ಟಿ. ಶರಣಪ್ಪ ತಿಳಿಸಿದರು. ‘ಅ.14 ರಂದು ರಾತ್ರಿ 12 ಗಂಟೆ 18 ನಿಮಿಷದಿಂದ 1 ಗಂಟೆ 20 ನಿಮಿಷದವರೆಗೆ ಶನಿ ಗ್ರಹವು ಚಂದ್ರನ ಹಿಂದಕ್ಕೆ ಚಲಿಸುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಅಚ್ಛಾದನೆ (Occultation) ಎನ್ನುವರು. ಚಂದ್ರನ ಮರೆಗೆ ಸರಿಯುವ ಹಾಗೂ ಮರೆಯಿಂದ ಹೊರಬರುವ ಶನಿಗ್ರಹವನ್ನು ನೋಡುವುದೇ ಅದ್ಭುತ. ಬರಿಗಣ್ಣಿಗೆ ಗೋಚರಿಸುವ ಈ ವಿದ್ಯಮಾನವನ್ನು ಸಾಧಾರಣ ಬೈನಾಕ್ಯುಲರ್ ಮೂಲಕ ಸ್ಪಷ್ಟವಾಗಿ ವೀಕ್ಷಿಸಬಹುದು’ ಎಂದರು. ‘1986 ರಲ್ಲಿ ಕಾಣಿಸಿದ್ದ ಹ್ಯಾಲಿ ಧೂಮಕೇತು ಉಳಿಸಿಹೋದ ಅದರ ತ್ಯಾಜ್ಯಗಳ ಉಲ್ಕಾವರ್ಷ ಒರಾಯನ್ ನಕ್ಷತ್ರ ಪುಂಜದಲ್ಲಿ ಅ.21 ರಂದು ಕಂಡುಬರಲಿದೆ. ಗಂಟೆಗೆ 25 ರಿಂದ 30 ಉಲ್ಕೆಗಳು ಉರಿದು ಬೀಳುತ್ತವೆ. ಇದೊಂದು ಕಣ್ಣಿಗೆ ಹಬ್ಬವಾಗಿರಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.