ಈ ಕ್ಷಣದಿಂದಲೇ ಖರೀದಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು
ನಾಗರಾಜ್ ಜಿಲ್ಲಾ ವ್ಯವಸ್ಥಾಪಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಎಲ್ಲಾ ಭತ್ತವನ್ನು ಖರೀದಿಸಿ’
‘ ‘ಭತ್ತ ಖರೀದಿಗೆ ಮಿತಿ ಹೇರಬಾರದು ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಬೆಳೆದಿರುವ ಎಲ್ಲಾ ಭತ್ತವನ್ನು ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ರೈತ ಬೆಳೆದಿರುವ ಪೂರ್ಣ ಪ್ರಮಾಣದ ಭತ್ತವನ್ನು ಖರೀದಿಸಬೇಕು. ಸರ್ಕಾರದ ರಜೆ ದಿನಗಳಲ್ಲಿಯೂ ಖರೀದಿ ಕೇಂದ್ರ ತೆರೆದು ನೋಂದಣಿ ಪ್ರಕ್ರಿಯೆ ನಡೆಸಬೇಕು. ಖರೀದಿ ಕೇಂದ್ರ ತೆರೆದಾಗ ಅಲ್ಲಿ ಸಿಬ್ಬಂದಿ ಹಾಜರಿರಬೇಕು. ಕೇಂದ್ರದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ‘ಖರೀದಿ ನೋಂದಣಿ ಬಗ್ಗೆ ಇದುವರೆಗೂ ಎಲ್ಲಿಯೂ ಬ್ಯಾನರ್ ಕಟ್ಟಿಲ್ಲ. ಯಾವ ರೈತರಿಗೂ ಕರಪತ್ರ ಹಂಚಿಲ್ಲ. ಆದ್ದರಿಂದ ಜನದಟ್ಟಣೆ ಇರುವ ಕಡೆಗಳಲ್ಲಿ ಬ್ಯಾನರ್ ಕಟ್ಟಬೇಕು. ಕೃಷಿ ಸಖಿ ಮತ್ತು ಪಶು ಸಖಿಯರ ಮೂಲಕ ಪ್ರತಿ ಹಳ್ಳಿಗಳಲ್ಲಿ ಕರಪತ್ರಗಳನ್ನು ಹಂಚುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಕಾರಿಗನೂರಿನಲ್ಲಿಯೂ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿದರು.