ಹಿರೇಮಠದ ನಿಯೋಜಿತ ಓಂಕಾರೇಶ್ವರ ಮರಿದೇವರು ನೇತೃತ್ವದಲ್ಲಿ ಎಳೆಗೌರಮ್ಮನ ಕಲಶ ಸ್ಥಾಪಿಸಿ ವಿವಿಧ ಪುರೋಹಿತರ ಮಂತ್ರಘೋಷಣೆಯೊಂದಿಗೆ, ಶಾಸ್ತ್ರೋಕ್ತವಾಗಿ ರುದ್ರಾಭೀಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಹಿರೇಮಠದಲ್ಲಿ ಹಲವಾರು ವರ್ಷಗಳಿಂದ ಗೌರಿಯನ್ನು ಭಕ್ತಿಭಾವಗಳಿಂದ ಪೂಜಿಸುತ್ತಾ ಬಂದಿದ್ದಾರೆ. ಎಳೆಗೌರಮ್ಮನನ್ನು ಪ್ರತಿಷ್ಠಾಪಿಸಿದ ಹತ್ತಿಯ ಎಳೆಯನ್ನು ಮಠದಿಂದ ಸಾಸ್ವೆಹಳ್ಳಿ, ಹನುಮನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮದ ಭಕ್ತರು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ.