ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಗಿಡ ಕತ್ತರಿಸಿ, ಆ್ಯಸಿಡ್ ಹಾಕಿ ಸುಟ್ಟ ಕಿಟಗೇಡಿಗಳು

Published 22 ಮೇ 2023, 6:33 IST
Last Updated 22 ಮೇ 2023, 6:33 IST
ಅಕ್ಷರ ಗಾತ್ರ

ಧಾರವಾಡ: ಮನೆಯೊಂದರ ಮುಂದೆ ಬೆಳೆದಿದ್ದ ಗಿಡವನ್ನು ಕತ್ತರಿಸಿದ್ದಲ್ಲದೇ, ಅದು ಮತ್ತೆ ಬೆಳೆಯಲೇಬಾರದು ಎಂಬ ದುರುದ್ದೇಶದಿಂದ ಕ್ರೂರಿಗಳು ಅದಕ್ಕೆ ಆ್ಯಸಿಡ್ ಹಾಕಿರುವ ಘಟನೆಯೊಂದು ಇಲ್ಲಿನ ವಿಕಾಸ ನಗರದಲ್ಲಿ ನಡೆದಿದ್ದು, ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ನಿವೃತ್ತ ಎಂಜಿನಿಯರ್ ಎಫ್.ಎಸ್. ಅಣ್ಣಿಗೇರಿ ಅವರ ಮಗ ವಿನಾಯಕ ಅಣ್ಣಿಗೇರಿ ಹಾಗೂ ಆತನ ಗೆಳೆಯರು ಮರವನ್ನು ಕತ್ತರಿಸಿ, ಅದಕ್ಕೆ ಆ್ಯಸಿಡ್ ಹಾಕಿ ಸುಟ್ಟಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವ್ಯಕ್ತಿಗೆ ಆರೋಪಿಯು ವಿಡಿಯೋ ಡಿಲೀಟ್ ಮಾಡುವಂತೆ ಬೆದರಿಕೆಯೊಡ್ಡಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಧಾರವಾಡ360 ಎಂಬ ಹೆಸರಿನವರು ಹಂಚಿಕೊಂಡಿದ್ದಾರೆ.

ಬೆಳೆದು ನಿಂತ ಗಿಡ–ಮರಗಳನ್ನು ಕತ್ತರಿಸಲು ಸಂಬಂಧಿಸಿದ ಅರಣ್ಯ ಅಧಿಕಾರಿ ಅಥವಾ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಆದರೆ, ಇಲ್ಲಿ ಯಾವುದೇ ಪರವಾನಗಿ ಇಲ್ಲದೇ ಕತ್ತರಿಸಿದ್ದು ಮಾತ್ರವಲ್ಲದೇ, ಅದಕ್ಕೆ ಆ್ಯಸಿಡ್ ಹಾಕಿ ಸುಟ್ಟು ಹಾಕಿರುವುದು ಅಪರಾಧವಲ್ಲವೇ? ಇದಕ್ಕೆ ಸಾಕ್ಷಿಗಳಿದ್ದರೂ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ? ಎಂದು ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಅಕ್ಕಪಕ್ಕದ ಮನೆಯವರ ಜಗಳದಿಂದ ಈ ಘಟನೆ ನಡೆದಿದೆ. ಜಗಳ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಅಲ್ಲಿಗೆ ಹೋಗಿದ್ದರು. ಇದು ಅರಣ್ಯ ಇಲಾಖೆ ವಿಷಯವಾಗಿದೆ ಎಂದು ಉಪನಗರ ಠಾಣೆಯ ಪೊಲೀಸರು ಪ್ರಜಾವಣೀಗೆ ತಿಳಿಸಿದರು.

ಈ ಸಂಬಂಧ ಪ್ರತಿಕ್ರಯಿಸಿದ ಧಾರವಾಡ ಆರ್ ಎಫ್ಒ ಈರೇಶ ಕಬ್ಬಿನ, ಗಿಡಗಳನ್ನು ಕತ್ತರಿಸಿ, ಅದಕ್ಕೆ ಆ್ಯಸಿಡ್ ಹಾಕಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಒಂದುವೇಳೆ ಹಾಗೇನಾದರೂ ನಡೆದಿದ್ದರೇ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT