ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಸವಾಲು, ಜಾಗೃತೆ ಅಗತ್ಯ: ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಕೆ.ಜಿ. ಶಾಂತಿ

Published 15 ಡಿಸೆಂಬರ್ 2023, 16:17 IST
Last Updated 15 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಂದಿನ ದಿನಮಾನಗಳಲ್ಲಿ ಡಿಜಿಟಲ್ ವ್ಯವಹಾರ ಸವಾಲಾಗಿ ಪರಿಣಮಿಸಿದ್ದು, ಲೆಕ್ಕಪರಿಶೋಧಕರು ಪ್ರತಿದಿನ ಅಧ್ಯಯನ, ಪರಿಶೀಲನೆ, ನಿರ್ವಹಣೆ ಜೊತೆ ಜಾಗೃತೆಯಿಂದ ಇರುವುದು ಅತ್ಯವಶ್ಯಕ’ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಶುಕ್ರವಾರ ನಡೆದ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಐ) ಹುಬ್ಬಳ್ಳಿ ಶಾಖೆಯ 36ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ದೇಶದ ಆರ್ಥಿಕ ವ್ಯವಸ್ಥೆಯ ಬುನಾದಿಯಾಗಿರುವ ಲೆಕ್ಕಪರಿಶೋಧಕರ ಕಾರ್ಯ ಶ್ಲಾಘನೀಯ. ದೇಶದ ಅಭಿವೃದ್ಧಿಯ ವಿನ್ಯಾಸಕಾರರಾಗಿಯೂ ಲೆಕ್ಕಪರಿಶೋಧಕರು ಕಾರ್ಯ ನಿರ್ವಹಿಸುತ್ತಾರೆ’ ಎಂದರು.

‘ಲೆಕ್ಕಪರಿಶೋಧಕರ ಸಂಸ್ಥೆ ತೆರಿಗೆ ಸಂಗ್ರಹ ಹಾಗೂ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತದೆ. ಇತ್ತೀಚೆಗೆ ಆನ್‌ಲೈನ್‌ ವ್ಯವಹಾರಗಳು ಹೆಚ್ಚು ನಡೆಯುತ್ತಿದ್ದು, ಲೆಕ್ಕಪರಿಶೋಧನೆಗಳು ಸಹ ಡಿಜಿಟಲ್‌ನೊಂದಿಗೆ ಸಾಗಬೇಕಾಗಿದೆ. ಜೊತೆಗೆ ಸೈಬರ್ ಭದ್ರತೆ ಮತ್ತು ಎಐ ತಂತ್ರಜ್ಞಾನದ ಕುರಿತು ಮಾಹಿತಿ ಹೊಂದಿರಬೇಕು. ದೊಡ್ಡ ಆಲೋಚನೆ ಇಟ್ಟುಕೊಂಡು, ನಿರಂತರ ಪ್ರಯತ್ನದೊಂದಿಗೆ ಕೆಲಸಕ್ಕೆ ಅಗತ್ಯವಾದ ಕೌಶಲ ಬೆಳೆಸಿಕೊಳ್ಳಬೇಕು’ ಎಂದರು.

ನವದೆಹಲಿಯ ಐಸಿಎಐ ಕೇಂದ್ರ ಪರಿಷತ್ ಸದಸ್ಯ ಖೋಥಾ ಶ್ರೀನಿವಾಸ, ‘ದೇಶದಲ್ಲಿ 121 ಲೆಕ್ಕಪರಿಶೋಧಕ ಶಾಖೆಗಳಲ್ಲಿ, 4 ಲಕ್ಷ ಲೆಕ್ಕ ಪರಿಶೋಧಕರಿದ್ದಾರೆ. ಬೆಂಗಳೂರಿನಲ್ಲಿರುವ ಶಾಖೆ ಅತಿದೊಡ್ಡದಾಗಿದ್ದು, 413 ಸದಸ್ಯರಿದ್ದಾರೆ’ ಎಂದರು.

‘ಟೈರ್‌ 2–3 ಸಿಟಿ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ನಾವೆಲ್ಲರೂ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಸಾಗಬೇಕಿದೆ’ ಎಂದು ಐಸಿಎಐ ದಕ್ಷಿಣ ಭಾರತ ಪ್ರಾಂತದ ಅಧ್ಯಕ್ಷ ಪನ್ನಾರಾಜ್ ಎಸ್. ಹೇಳಿದರು.

ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜನ ಪಿಸೆ, ಸಮ್ಮೇಳನ ಸಮಿತಿ ಚೇರ್ಮನ್‌ ಚನ್ನವೀರ ಮುಂಗರವಾಡಿ, ಕಾರ್ಯದರ್ಶಿ ಧನಪಾಲ್ ಮುನ್ನೊಳ್ಳಿ, ಸಂಯೋಜಕ ಗುಲಾಬ್ ಛಾಜೇಡ ಸೇರಿ ಹಲವರಿದ್ದರು. ಸಮ್ಮೇಳನದಲ್ಲಿ ಸುಮಾರು 400 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT