ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025–26ನೇ ಸಾಲಿನ ಬಜೆಟ್ಗೆ ಧಾರವಾಡ ಜಿಲ್ಲೆಯ ಜನ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಜನರ ಹಲವು ನಿರೀಕ್ಷೆಗಳಿಗೆ ಸ್ಪಂದನೆ ದೊರೆತಿಲ್ಲ. ಕುಡಿಯುವ ನೀರು, ನೀರಾವರಿ, ಕೃಷಿ, ಆರೋಗ್ಯ, ಮೂಲಸೌಕರ್ಯ, ಕೈಗಾರಿಕೆಗಳಿಗೆ ಪ್ರೋತ್ಸಾಹ, ಉದ್ಯೋಗಾವಕಾಶ ಸೃಷ್ಟಿ ಸೇರಿದಂತೆ ಯಾವುದೇ ದೀರ್ಘಕಾಲೀನ ಯೋಜನೆಗಳು ಜಿಲ್ಲೆಗೆ ದೊರೆತಿಲ್ಲವೆಂದು ಜನಸಾಮಾನ್ಯರು, ರೈತರು, ಉದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಯೋಜನೆಗಳನ್ನು ಕೈಬಿಟ್ಟು, 3–4 ಯೋಜನೆಗಳನ್ನು ನಾಮಕಾವಸ್ತೆ ನೀಡುವ ಮೂಲಕ ಮುಖ್ಯಮಂತ್ರಿ ಅವರು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಜನರ ಬಹುನಿರೀಕ್ಷಿತ ಕಳಸಾ– ಬಂಡೂರಿ ನಾಲಾ ಜೋಡಣೆ ಕಾಮಗಾರಿ ಅನುಷ್ಠಾನ ಮಾಡಲು ಅನುದಾನ ಮೀಸಲಿಟ್ಟಿಲ್ಲ. ಕೇಂದ್ರ ಸರ್ಕಾರ ಅನುಮತಿ ನೀಡಿದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆಂದು ಹೇಳಿ ಮುಖ್ಯಮಂತ್ರಿಯವರು ಕೈತೊಳೆದುಕೊಂಡು ಬಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಇದೇ ಮುಖ್ಯಮಂತ್ರಿ ಅವರು ₹ 10,000 ಕೋಟಿ ನೀಡುವುದಾಗಿ ಘೋಷಿಸಿದ್ದರು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ರೈತ ಮುಖಂಡರು.

ಧಾರವಾಡ– ಕಿತ್ತೂರು– ಬೆಳಗಾವಿ ರೈಲು ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡಿಲ್ಲ. ಹಿಂದೆ ಮಾಡಿಸಿದ್ದ ಸಮೀಕ್ಷೆ ಏನಾಯಿತು? ಭೂ ಸ್ವಾಧೀನ ಯಾವಾಗ ಮಾಡಲಾಗುತ್ತದೆ? ಎನ್ನುವುದರ ಬಗ್ಗೆ ಚಕಾರವಿಲ್ಲ. ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿ– ಆರ್ಐ) ಉನ್ನತೀಕರಣ, ರಿಂಗ್ ರೋಡ್, ಫ್ಲೈಓವರ್, 24x7 ನಿರಂತರ ಕುಡಿಯುವ ನೀರು ಯೋಜನೆಯನ್ನು ಅವಳಿ ನಗರದಾದ್ಯಂತ ವಿಸ್ತರಣೆ ಹಾಗೂ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಲಘು ರೈಲು ಸಂಚಾರ ಯೋಜನೆಯ ಬಗ್ಗೆ ಪ್ರಸ್ತಾವ ಇಲ್ಲ ಎಂದು ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 3 ಎಪಿಎಂಸಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಿತು. ಆದರೆ, ರಾಜ್ಯ ಸರ್ಕಾರ ಇನ್ನೂ ಹಿಂದಕ್ಕೆ ಪಡೆದಿಲ್ಲ. ಇದರ ಬಗ್ಗೆ ಬಜೆಟ್ನಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ರೈತ ಪರ ಬಜೆಟ್ ಇದಾಗಿಲ್ಲ’ ಎಂದು ರೈತಮುಖಂಡ ಗಂಗಾಧರ ಪಾಟೀಲಕುಲಕರ್ಣಿ ಹೇಳಿದರು.

ಕಾರ್ಯರೂಪಕ್ಕೆ ಬಾರದ ಹಿಂದಿನ ಘೋಷಣೆಗಳು:

ಹಿಂದಿನ ವರ್ಷಗಳಲ್ಲಿ ಘೋಷಣೆ ಮಾಡಿದ ಹಲವು ಯೋಜನೆಗಳು ಇದುವರೆಗೆ ಆರಂಭಗೊಂಡಿಲ್ಲ. ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಜೈವಿಕ ಸಿಎನ್ಜಿ ಘಟಕ (ಬಯೋ ಸಿಎನ್ಜಿ ಪ್ಲಾಂಟ್), ಹುಬ್ಬಳ್ಳಿಯಲ್ಲಿ ₹12 ಕೋಟಿ ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ, ಹುಬ್ಬಳ್ಳಿ–ಧಾರವಾಡದಲ್ಲಿ ಇಂಟಿಗ್ರೇಟೆಡ್ ಟೌನ್ಶಿಪ್ (ಎಲ್ಲ ಸೌಲಭ್ಯಗಳನ್ನು ಒಳಗೊಂಡ ವಸತಿ ಪ್ರದೇಶ), ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಡೇ–ಕೇರ್ ಕಿಮೋಥೆರಪಿ ಕೇಂದ್ರ, ಧಾರವಾಡದಲ್ಲಿ ವಿಶೇಷ ಹೂಡಿಕೆ ಪ್ರದೇಶ ಇನ್ನೂ ನಿರ್ಮಾಣವಾಗಿಲ್ಲ. ನವಲಗುಂದದ ಬಳಿ ಜವಳಿ ಪಾರ್ಕ್ ಇನ್ನೂ ಆರಂಭವಾಗಿಲ್ಲ. ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸಮೀಪದ ಅಧ್ಯಾಪಕ ನಗರದಲ್ಲಿ ‘ಜಾನಪದ ಜಗತ್ತು’ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದೆ.

ವರದಿ ನೀಡಲಿ:

‘ಈ ಸಲದ ಬಜೆಟ್ ಬೆಂಗಳೂರು ಕೇಂದ್ರೀತವಾಗಿದೆ. ಉತ್ತರ ಕರ್ನಾಟಕ ವಿಶೇಷವಾಗಿ ಹುಬ್ಬಳ್ಳಿ– ಧಾರವಾಡ ಬೆಳವಣಿಗೆಗೆ ಏನೂ ನೀಡಿಲ್ಲ. ಕೈಗಾರಿಕೆಗಳ ಅಭಿವೃದ್ಧಿಯಾಗಲಿ, ಧಾರವಾಡ– ಕಿತ್ತೂರು– ಬೆಳಗಾವಿ ರೈಲ್ವೆ ಯೋಜನೆಗಾಗಲಿ ಒತ್ತು ನೀಡಿಲ್ಲ’ ಎಂದು ಉದ್ಯಮಿ ವಿನಯ ಜವಳಿ ಪ್ರತಿಕ್ರಿಯಿಸಿದರು.

ಪ್ರತಿವರ್ಷ ಬಜೆಟ್ ಮಂಡಿಸುವ ಸಮಯದಲ್ಲಿ, ಹಿಂದಿನ ವರ್ಷದ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳ ಪ್ರಗತಿಯ ಬಗ್ಗೆಯೂ ಹೇಳಬೇಕು. ಹಿಂದಿನ ಬಜೆಟ್ಗಳ ಘೋಷಣೆಗಳು ಎಷ್ಟರ ಮಟ್ಟಿಗೆ ಸಾಕಾರಗೊಂಡಿವೆ, ಯಾವ ಹಂತದಲ್ಲಿವೆ ಎನ್ನುವುದನ್ನು ಜನರ ಮುಂದೆ ಇಡಬೇಕು ಎಂದು ಅವರು ಒತ್ತಾಯಿಸಿದರು.

ಧಾರವಾಡ ಜಿಲ್ಲೆಗೆ ಬಜೆಟ್ ಕೊಡುಗೆ:

ಹೊಸದಾಗಿ ಘೋಷಣೆಯಾಗಿರುವ ಅಳ್ನಾವರ ಅಣ್ಣಿಗೇರಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ.

ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿಯೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ₹ 1000 ಕೋಟಿ ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ (LEAP) ಪ್ರಾರಂಭಿಸಲಾಗುವುದು. ಇದಕ್ಕೆ ಪ್ರಸಕ್ತ ಸಾಲಿನಲ್ಲಿ ₹ 200 ಕೋಟಿ ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ರಮದಡಿ ಹುಬ್ಬಳ್ಳಿ-ಧಾರವಾಡದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸುವುದು.

ಧಾರವಾಡದಲ್ಲಿ ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅಭಿವೃದ್ಧಿಪಡಿಸುವುದು. ಕಿಯೋನಿಕ್ಸ್ ವತಿಯಿಂದ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳನ್ನೊಳಗೊಂಡ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು (ಜಿಟಿಸಿ) ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗುವುದು.

ವಾಹನ ಸಂಚಾರ ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಧಾರವಾಡದಲ್ಲಿ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳ ಅಳವಡಿಕೆ. ಹಳೆಯ ಯೋಜನೆಗಳ ಪ್ರಸ್ತಾವ

ಕಳಸಾ-ಬಂಡೂರಾ ನಾಲಾ ತಿರುವು ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು.

ನವಲಗುಂದ ತಾಲ್ಲೂಕಿನ ಬೆಣ್ಣೆಹಳ್ಳದಲ್ಲಿ ಪ್ರವಾಹ ನಿಯಂತ್ರಿಸಲು ಕಳೆದ ವರ್ಷ ನೀಡಲಾಗಿರುವ ₹ 200 ಕೋಟಿ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.