ಬುಧವಾರ, ಅಕ್ಟೋಬರ್ 5, 2022
26 °C

ಹುಬ್ಬಳ್ಳಿ: ಆರ್‌ಎಸ್‌ಎಸ್‌ನವರಿಗೆ ರಾಷ್ಟ್ರಧ್ವಜ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಆರ್‌ಎಸ್‌ಎಸ್‌ನ ಕೇಶವ ಕುಂಜ ಕಚೇರಿಯಲ್ಲಿ ಆರ್‌ಎಸ್‌ಎಸ್‌ ಪ್ರಮುಖರಿಗೆ ವಿದ್ಯಾನಗರ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿ ಮಠ ಅವರ ನೇತೃತ್ವದಲ್ಲಿ ರಾಷ್ಟಧ್ವಜ ಹಸ್ತಾಂತರಿಸಲಾಯಿತು.

ಮೊದಲಿಗೆ ನಮಗೆ ಬೇಡ, ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಆಆರ್‌ಎಸ್‌ಎಸ್‌ನ ಪ್ರಮುಖರು ಹೇಳಿದರು. ಆರ್‌ಎಸ್‌ಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಸೇರಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು. 

ಆರ್‌ಎಸ್‌ಎಸ್‌ ಪ್ರಮುಖ ಅಮರನಾಥ ಅವರು ಕಚೇರಿಯಿಂದ ರಾಷ್ಟಧ್ವಜ ತಂದು ನಮ್ಮ ಬಳಿ ಇದೆ. ಇದನ್ನು ನಾವು ಹಾರಿಸುತ್ತೇವೆ ಎಂದರು.

ನಂತರ ರಾಷ್ಟ್ರ ಧ್ವಜ ಸ್ವೀಕರಿಸಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು