ಧಾರವಾಡ: ಧಾರವಾಡದ ಸಪ್ತಾಪೂರ ಬಾವಿ ಬಳಿಯ ಮಾಜಿ ಸೈನಿಕರೊಬ್ಬರ ‘ಸೈನಿಕ್ ಮೆಸ್’ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆ ಎಎಸ್ಐ ವಿದ್ಯಾನಂದ ಸುಬೇದಾರ್ ಹಾಗೂ ಕಾನ್ಸ್ಟೆಬಲ್ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಸಪ್ತಾಪೂರ ಬಾವಿಯ ವಿವೇಕಾನಂದ ವೃತ್ತದ ಸೈನಿಕ ಮೆಸ್ನಲ್ಲಿ ಸೆ.28 ರಂದು ರಾತ್ರಿ ಗಲಾಟೆ ನಡೆದಿತ್ತು. ಅವಧಿ ಮೀರಿದ್ದರೂ ಬಾಗಿಲು ಬಂದ್ ಮಾಡಿಲ್ಲ ಎಂಬ ವಿಚಾರವಾಗಿ ಗಲಾಟೆ ನಡೆದಿದೆ ಎಂದು ಆರೋಪಿಸಲಾಗಿತ್ತು.

ಪೋಲೀಸರು ಮೆಸ್ ಮಾಲೀಕ, ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ರಾಮಪ್ಪ ಪತ್ನಿ ಗೀತಾ ದೂರು ನೀಡಿದ್ದರು.
.ಧಾರವಾಡ | ಸಾಧನೆಗೆ ಶ್ರದ್ಧೆ, ಕಠಿಣ ಪರಿಶ್ರಮ ಮುಖ್ಯ: ಎನ್. ಶಶಿಕುಮಾರ್.ಧಾರವಾಡ | ಐದು ವರ್ಷದಲ್ಲಿ 5,002 ಅಪಘಾತ ಪ್ರಕರಣ: 1,743 ಮಂದಿ ಸಾವು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.