ಧಾರವಾಡ: ಧಾರವಾಡ ಮೂಲದ ದುಬೈನ ಅಬುದಾಬಿ ನಿವಾಸಿ ಅಶ್ವಿನ್ ಹಾಲಭಾವಿ ಅವರ ಪುತ್ರಿ ಆಧ್ಯಾ ಹಾಲಭಾವಿ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾಳೆ.
ಮೇ 27ರಂದು ದುಬೈನ ಅಬುದಾಬಿಯಲ್ಲಿ ನಡೆದ ಐಐಎಫ್ಎ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಧ್ಯಾ ಗ್ರುಪ್ ಡ್ಯಾನ್ಸ್‌ನಲ್ಲಿ ಸಲ್ಮಾನ್ ಖಾನ್ ಜೊತೆ ನೃತ್ಯಮಾಡಿದ್ದಾಳೆ.
10 ವರ್ಷದ ಆಧ್ಯಾ, ಧಾರವಾಡದ ಚಿತ್ರ ಕಲಾವಿದ ‘ಹಾಲಬಾವಿ ಸ್ಕೂಲ್ ಆಫ್ ಆರ್ಟ್’ ಸಂಸ್ಥಾಪಕ ಡಿ.ವಿ. ಹಾಲಬಾವಿ ಅವರ ಮರಿ ಮೊಮ್ಮಗಳು.