ಧಾರವಾಡ: ‘ವಾರಂಟಿ’ ಇದ್ದರೂ ಎಲೆಕ್ಟ್ರಿಕ್ ಸ್ಕೂಟರ್ನ (ಇವಿ) ಬ್ಯಾಟರಿ ರಿಪೇರಿ ಮಾಡಿಕೊಡದ ಪ್ರಕರಣದಲ್ಲಿ ಟ್ರೈಯೋ ಗ್ರೂಪ್ಸ್ ಪ್ಯೂರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ತಿಂಗಳೊಳಗೆ ವಾಹನಕ್ಕೆ ಹೊಸ ಬ್ಯಾಟರಿ ಅಳವಡಿಸಿಕೊಡಬೇಕು ಎಂದು ಆದೇಶಿಸಿದರು.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹ 50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು. ಹೊಸ ಬ್ಯಾಟರಿ ಅಳವಡಿಸಿ ರಿಪೇರಿ ಮಾಡಿಕೊಡಲು ತಪ್ಪಿದರೆ ಸ್ಕೂಟರ್ ಖರೀದಿ ಹಣ ₹ 80 ಸಾವಿರವನ್ನು ವಾಪಸ್ ನೀಡಬೇಕು ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?:

ಧಾರವಾಡದ ಇಸ್ಮಾಯಿಲ್ ಮಾನಿಕ ಅವರು 2022 ಅಕ್ಟೋಬರ್ 25ರಂದು ಇವಿ ಸ್ಕೂಟರ್ ಖರೀದಿಸಿದ್ದರು. ಸ್ಕೂಟರ್ ವಾರಂಟಿ ಅವಧಿ ಐದು ವರ್ಷ ಇತ್ತು.

ಕೆಲ ದಿನಗಳಲ್ಲಿ ಸ್ಕೂಟರ್ನ ಬ್ಯಾಟರಿ ಕಾರ್ಯ ಸ್ಥಗಿತವಾಗಿತ್ತು. ಮೈಲೇಜ್ ಬಹಳ ಕಡಿಮೆಯಾಗಿತ್ತು. ವಾಹನದ ದೋಷವನ್ನು ಕಂಪನಿಯ ಗಮನಕ್ಕೆ ತಂದರೂ ಸರಿಪಡಿಸಿರಲಿಲ್ಲ. ಇಸ್ಮಾಯಿಲ್ ಅವರು 2024 ಆಗಸ್ಟ್ 20ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.