ಹುಬ್ಬಳ್ಳಿ: ‘ಪೂರ್ವ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಕ್ಷೇತ್ರದ ಚಿತ್ರಣವನ್ನು ಬದಲಿಸಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ₹150 ಕೋಟಿ ಅನುದಾನ ಬಿಡುಗಡೆ ಆಗಲಿದೆ ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಹಳೇ ಹುಬ್ಬಳ್ಳಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ಎನ್.ಎ.ನಗರದ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪೂರ್ವ ವಿಧಾನ ಕ್ಷೇತ್ರದಲ್ಲಿ ಒಳಚರಂಡಿ ಅಭಿವೃದ್ಧಿಗಾಗಿ ₹40ಕೋಟಿ ಮತ್ತು ರಸ್ತೆಗಳ ಅಭಿವೃದ್ಧಿಗಾಗಿ ₹100ಕೋಟಿ ಅನುದಾನ ಸರ್ಕಾರ ಒದಗಿಸುತ್ತಿದೆ. ಇದರಿಂದ ಪೂರ್ವ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.

ಕಳೆದ 11ವರ್ಷಗಳಿಂದ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಆದರೂ ಇನ್ನು ಅನೇಕ ಮಹತ್ತರ ಯೋಜನೆಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಕ್ಷೇತ್ರವನ್ನು ಮಾದರಿಗೊಳಿಸಲಾಗುವುದು ಎಂದು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ಕಾಂಗ್ರೆಸ್ ಮುಖಂಡರಾದ ಮುತವಲ್ಲಿ ಮಕ್ಬುಲ್ಅಹ್ಮದ್ ಕಳಸ, ರಫೀಕ್ ಸಂದಲವಾಲೆ, ಸದ್ದಾಂ ಬೆಂಗಳೂರ, ಅಷ್ಪಾಕ್ ಲಕ್ಕುಂಡಿ, ನಾಸಿರ್ ಅಸುಂಡಿ, ಸೈಯದ್ ಸಲೀಮ್ ಮುಲ್ಲಾ, ಮುಸ್ತಾಕ್ ಮುದಗಲ್, ತೌಫಿಕ್ ಕಾರಡಗಿ, ಅಲ್ತಾಫ್ ಮುಲ್ಲಾ ಅಬ್ದುಲ್ ಕೋಳೂರ, ಮುಸ್ತಾಕ್ ಮುಳಗುಂದ ಇದ್ದರು.