ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿಯಲ್ಲಿ ಕೆಪಿಎಲ್ ಕ್ರಿಕೆಟ್‌ ಟೂರ್ನಿ ಮಾರ್ಚ್‌ 7 ರಿಂದ

Published 12 ಫೆಬ್ರುವರಿ 2024, 13:42 IST
Last Updated 12 ಫೆಬ್ರುವರಿ 2024, 13:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಉಣಕಲ್‌ನಲ್ಲಿರುವ ಆರ್‌.ಕೆ.ರಿಕ್ರಿಯೇಶನ್‌ ಆ್ಯಂಡ್‌ ಸ್ಪೋರ್ಟ್ಸ್‌ ಅಸೋಸಿಯೇಷನ್‌ ವತಿಯಿಂದ ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌’ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿಯೂ ’ಕರುನಾಡು ಪ್ರೀಮಿಯರ್‌ ಲೀಗ್‌’ ಹೊನಲು ಬೆಳಕಿನ ಟೆನ್ನಿಸ್‌ ಬಾಲ್‌, ಕ್ರಿಕೆಟ್‌ ಪಂದ್ಯಾವಳಿ ಮಾರ್ಚ್‌ 7ರಿಂದ 10ರವರೆಗೂ ಆಯೋಜಿಸಲಾಗುತ್ತಿದೆ ಎಂದು ಅಸೋಸಿಯೇಷನ್‌ ನಿರ್ದೇಶಕ ಲಿಂಗರಾಜ ಬಿಳೆಕಲ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು ಎಂಟು ಪ್ರಾಂಚೈಸಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಇದಕ್ಕಾಗಿ ಆಟಗಾರರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಫೆಬ್ರುವರಿ 15ರವರೆಗೆ ಸಮಯಾವಕಾಶ ನೀಡಲಾಗಿದೆ. ಆನಂತರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದರು.

ಲೀಗ್‌ ಸುತ್ತಿನಲ್ಲಿ ಪ್ರತಿ ತಂಡವು ಏಳು ಪಂದ್ಯಗಳನ್ನು ಆಡಲಿದೆ. ಎಲ್ಲ ಆಟಗಾರರು ತಂಗುವುದಕ್ಕೆ ಮತ್ತು ಊಟದ ವ್ಯವಸ್ಥೆಯನ್ನು ಅಸೋಸಿಯೇಷನ್‌ನಿಂದ ಮಾಡಲಾಗುತ್ತಿದೆ. ಪಂದ್ಯವು 10 ಓವರ್‌ಗಳಿಂದ ಕೂಡಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ ₹4 ಲಕ್ಷ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ₹3.30 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದು ಹೇಳಿದರು. 

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿವೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉಣಕಲ್‌ಗೆ ಸೀಮಿತವಾಗಿದ್ದ ಆಟವನ್ನು ಇದೇ ವರ್ಷದಿಂದ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ. ರಾಜ್ಯದ ಪ್ರತಿಭಾವಂತ ಕ್ರಿಕೆಟ್‌ ಆಟಗಾರರನ್ನು ಬೆಳಕಿಗೆ ತರುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಸೋಸಿಯೇಷನ್‌ ಮುಖ್ಯ ಕಾರ್ಯದರ್ಶಿ ಕಿರಣ ಪವಾರ್‌, ಮಂಜುನಾಥ ಬೆಟಸೂರ, ನಾಗೇಶ ಚವ್ಹಾಣ, ರಂಗನಗೌಡ ಚಿಕ್ಕನಗೌಡ, ದೇವರಾಜ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT