ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿತಾರ್ ವಾದಕ ಫಯಾಜ್ ಖಾನ್‌ಗೆ ‘ಸಂಗೀತ ಸಾಧಕ’ ಪ್ರಶಸ್ತಿ

Last Updated 1 ಅಕ್ಟೋಬರ್ 2022, 4:04 IST
ಅಕ್ಷರ ಗಾತ್ರ

ಧಾರವಾಡ: ‘ಹಿರಿಯ ಗಾಯಕ ಉಸ್ತಾದ್ ಫಯಾಜ್ ಖಾನ್ ಅವರಿಗೆ ಸಿತಾರ್ ವಾದಕ ಉಸ್ತಾದ್ ಹಮೀದ್ ಖಾನ್ ಸ್ಮರಣಾರ್ಥ ನೀಡುತ್ತಿರುವ ಸಂಗೀತ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಶಸ್ತಿಯು ₹25ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ’ ಎಂದುಕಲಾ ಸಂವಹನ ಟ್ರಸ್ಟ್‌ನ ಟ್ರಸ್ಟಿ ಪ್ರೊ. ನಾಗಪ್ಪ ಶಾಪೂರ ತಿಳಿಸಿದರು.

‘ಧಾರವಾಡ ಘರಾಣೆಯ 6ನೇ ತಲೆಮಾರಿನ ಸಿತಾರ ವಾದಕ ಉಸ್ತಾದ ಹಮೀದ ಖಾನ್‌ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಅ.2ರ ಸಂಜೆ 5ಕ್ಕೆ ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿಸಿತಾರ್ ತಯಾರಕ ಮೀರಜ್‌ನ ಅಹ್ಮದಸಾಬ್ ಸಿತಾರಮೇಕರ್ ಹಾಗೂ ಸಂಗೀತ ಪೋಷಕ ನಾರಾಯಣ ರಾವ್ ಹಾನಗಲ್ ಅವರನ್ನು ಸನ್ಮಾನಿಸಲಾಗುವುದು’ ಎಂದರು.

‘ಕಲಕೇರಿ ಸಂಗೀತ ಶಾಲೆಯ ಸ್ಥಾಪಕ ಸದಸ್ಯರಾದ ಹಮೀದ ಖಾನ್ ಅವರು ಒಳ್ಳೆಯ ಗುರುವೂ ಹೌದು. ಈ ಗುರುವಿನ ಸಂಸ್ಮರಣೆಯಲ್ಲಿ ಅವರ ಶಿಷ್ಯವೃಂದ ಕಲಾ ಸಂವಹನ ಟ್ರಸ್ಟ್‌ ಎಂಬ ಸಂಸ್ಥೆ ಹುಟ್ಟು ಹಾಕಿದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ಸಂಗೀತ ಸಾಧಕ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ’ ಎಂದರು.

‘ಕಾರ್ಯಕ್ರಮದಲ್ಲಿ ಪಂಡಿತ್ ಡಾ. ಎಂ.ವೇಂಕಟೇಶಕುಮಾರ್, ಉಸ್ತಾದ್ ಫಯಾಜ್ ಖಾನ್‌ ಅವರ ಗಾಯನ ಕಛೇರಿ ನಡೆಯಲಿದೆ. ಉಸ್ತಾದ್ ಹಮೀದ್ ಖಾನ್ ಹಾಗೂ ಡಾ. ಮೊಹಸೀನ್ ಖಾನ್ ಅವರ 28 ಶಿಷ್ಯರಿಂದ ‘ಅರ್ಪಣಾ’ ಎಂಬ ಸಿತಾರ್ ಮತ್ತು ತಬಲಾ ಕಾರ್ಯಕ್ರಮ ಜರುಗಲಿದೆ’ ಎಂದು ವಿವರಿಸಿದರು. ಮೊಹಸಿನ್ ಖಾನ್, ಹುಸೇನಸಾಬ ನದಾಫ, ಸಿ.ಎಸ್. ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT